Rice Water Benefits: ದುಬಾರಿ ಕ್ರೀಂ ಬೇಡ…ಮುಖದ ಹೊಳಪು ಹೆಚ್ಚಿಸಲು ಅಕ್ಕಿ ತೊಳೆದ ನೀರಿಗೆ ಈ ವಸ್ತು ಬೆರೆಸಿ ಹಚ್ಚಿದರೆ ಸಾಕು!

How To Make Rice Water Sheet Mask: ಅಕ್ಕಿ ನೀರಿನ ಶೀಟ್ ಮಾಸ್ಕ್ ಅನ್ನು ಬಳಸುವುದರಿಂದ ನಿಮ್ಮ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ. ಇದು ನಿಮ್ಮ ಮುಖದ ಮೇಲೆ ಇರುವ ಮೊಡವೆಗಳು ಮತ್ತು ಮೊಡವೆಗಳ ಕಲೆಗಳನ್ನು ತೆಗೆದುಹಾಕುತ್ತದೆ.

Written by - Bhavishya Shetty | Last Updated : May 28, 2023, 12:44 PM IST
    • ಮನೆಯಲ್ಲಿಯೇ ಅಕ್ಕಿ ನೀರಿನ ಫೇಸ್ ಮಾಸ್ಕ್ ನ್ನು ಹೇಗೆ ಮಾಡುವುದು ಎಂದು ತಿಳಿಸಿಕೊಡಲಿದ್ದೇವೆ
    • ಅಕ್ಕಿ ನೀರಿನ ಶೀಟ್ ಮಾಸ್ಕ್ ಅನ್ನು ಬಳಸುವುದರಿಂದ ನಿಮ್ಮ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ.
    • ಮುಖದ ಮೇಲೆ ಇರುವ ಮೊಡವೆಗಳು ಮತ್ತು ಮೊಡವೆಗಳ ಕಲೆಗಳನ್ನು ತೆಗೆದುಹಾಕುತ್ತದೆ
Rice Water Benefits: ದುಬಾರಿ ಕ್ರೀಂ ಬೇಡ…ಮುಖದ ಹೊಳಪು ಹೆಚ್ಚಿಸಲು ಅಕ್ಕಿ ತೊಳೆದ ನೀರಿಗೆ ಈ ವಸ್ತು ಬೆರೆಸಿ ಹಚ್ಚಿದರೆ ಸಾಕು! title=
Rice Water Benefits

How To Make Rice Water Sheet Mask: ಅಕ್ಕಿ ನೀರಿನಲ್ಲಿ ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ ಮತ್ತು ಆಂಟಿ-ಆಕ್ಸಿಡೆಂಟ್‌ಗಳಂತಹ ಅನೇಕ ಪೋಷಕಾಂಶಗಳಿವೆ. ಅದಕ್ಕಾಗಿಯೇ ಅಕ್ಕಿ ನೀರು ನಿಮ್ಮ ಆರೋಗ್ಯ ಮತ್ತು ಚರ್ಮಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: White Hair Tips: ಬಿಳಿ ಕೂದಲಿಗೆ ಡೈ ಮಾಡುವುದೇ ಬೇಡ… ಈ ಎಲೆ-ಬೀಜದ ಎಣ್ಣೆ ಬಳಸಿದರೆ ಸಾಕು!

ಇಂದು ನಾವು ಮನೆಯಲ್ಲಿಯೇ ಅಕ್ಕಿ ನೀರಿನ ಫೇಸ್ ಮಾಸ್ಕ್ ನ್ನು ಹೇಗೆ ಮಾಡುವುದು ಎಂದು ತಿಳಿಸಿಕೊಡಲಿದ್ದೇವೆ. ಅಕ್ಕಿ ನೀರಿನ ಶೀಟ್ ಮಾಸ್ಕ್ ಅನ್ನು ಬಳಸುವುದರಿಂದ ನಿಮ್ಮ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ. ಇದು ನಿಮ್ಮ ಮುಖದ ಮೇಲೆ ಇರುವ ಮೊಡವೆಗಳು ಮತ್ತು ಮೊಡವೆಗಳ ಕಲೆಗಳನ್ನು ತೆಗೆದುಹಾಕುತ್ತದೆ.

ಅಷ್ಟೇ ಅಲ್ಲದೆ, ಮುಖದಲ್ಲಿ ವಯಸ್ಸಾದಂತೆ ಗೋಚರಿಸುವ ರೇಖೆಗಳನ್ನು ಈ ಅಕ್ಕಿ ನೀರಿನ ಶೀಟ್ ಮಾಸ್ಕ್ ತೊಡೆದು ಹಾಕುತ್ತದೆ. ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳಂತಹ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ತ್ವಚೆಯು ದೀರ್ಘಕಾಲದವರೆಗೆ ಯಂಗ್ ಆಗಿ ಮತ್ತು ಹೊಳೆಯುವಂತೆ ಮಾಡುತ್ತದೆ,

ಅಕ್ಕಿ ವಾಟರ್ ಶೀಟ್ ಮಾಸ್ಕ್ ಮಾಡುವುದು ಹೇಗೆ ಎಂದು ತಿಳಿಯೋಣ:

ಅಕ್ಕಿ ನೀರಿನ ಶೀಟ್ ಮಾಸ್ಕ್ ಮಾಡಲು ಬೇಕಾಗುವ ಸಾಮಾಗ್ರಿಗಳು-

ಅಕ್ಕಿ ನೀರಿನ ಶೀಟ್ ಮಾಸ್ಕ್ ತಯಾರಿಸಲು ಮೊದಲು ಒಂದು ಬೌಲ್ ತೆಗೆದುಕೊಳ್ಳಿ. ನಂತರ ನೀವು 1 ಹಿಡಿ ಅಕ್ಕಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಇರಿಸಿ. ಇದರ ನಂತರ, ಮರುದಿನ ಬೆಳಿಗ್ಗೆ ಅಕ್ಕಿಯಿಂದ ನೀರನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ಪ್ರತ್ಯೇಕ ಪಾತ್ರೆಯಲ್ಲಿ ಹಾಕಿ. ನಂತರ ಸಾದಾ ಶೀಟ್ ಮಾಸ್ಕ್ ತೆಗೆದುಕೊಂಡು ಅದನ್ನು ಈ ನೀರಿನಲ್ಲಿ ಚೆನ್ನಾಗಿ ಅದ್ದಿ. ಈಗ ಅಕ್ಕಿ ನೀರಿನ ಶೀಟ್ ಮಾಸ್ಕ್ ಸಿದ್ಧವಾಗಿದೆ.

ಬೇಕು ಎಂದಾದರೆ ಅಲೋವೆರಾ ಜೆಲ್’ನ್ನು ಸಹ ಇದರ ಜೊತೆ ಬೆರೆಸಿಕೊಂಡು ಮುಖಕ್ಕೆ ಹಚ್ಚಬಹುದು. ಇದು ಮತ್ತಷ್ಟು ಪ್ರಯೋಜನವನ್ನು ನೀಡುತ್ತದೆ.

ಅಕ್ಕಿ ನೀರಿನ ಶೀಟ್ ಮಾಸ್ಕ್ ಅನ್ನು ಹೇಗೆ ಬಳಸುವುದು?

ಅಕ್ಕಿ ನೀರಿನ ಶೀಟ್ ಮಾಸ್ಕ್ ನ್ನು ಬಳಸುವ ಮೊದಲು ಮುಖವನ್ನು ತೊಳೆದು ಒರೆಸಿಕೊಳ್ಳಿ. ನಂತರ ಸಿದ್ಧಪಡಿಸಿದ ಶೀಟ್ ಮಾಸ್ಕ್ ಅನ್ನು ಮುಖದ ಮೇಲೆ ಹರಡಿ. ಸುಮಾರು 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದನ್ನು ತೆಗೆದು ನಿಮ್ಮ ಮುಖವನ್ನು ತೊಳೆದು ಸ್ವಚ್ಛಗೊಳಿಸಿ.

ಬೇಕು ಎಂದಾದಲ್ಲಿ ನೀವು ಅಕ್ಕಿಯನ್ನು ಕುದಿಸಬಹುದು, ಬಳಿಕ ಅದರ ನೀರನ್ನು ಶೀಟ್ ಮಾಸ್ಕ್ ಆಗಿ ಬಳಸಬಹುದು.

ಇದನ್ನೂ ಓದಿ: Fair Skin: ಮುಖದ ಟ್ಯಾನಿಂಗ್‌ನ್ನು ಒಂದೇ ವಾರದಲ್ಲಿ ತೊಲಗಿಸುತ್ತೆ ಈ ಮನೆಮದ್ದು!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News