Snake Prevention Tips: ಭೂಮಿಯ ಮೇಲೆ ಇರುವ ಅಪಾಯಕಾರಿ ಜೀವಿಗಳಲ್ಲಿ 'ಹಾವು' ಕೂಡ ಒಂದು. ಹೆಚ್ಚು ವಿಷಕಾರಿಯಾಗಿರುವ ಈ ಜೀವಿ ಮನುಷ್ಯನ ಪ್ರಾಣವನ್ನೇ ತೆಗೆಯುವಷ್ಟು ಭಯಾನಕ, ಆದರೆ ನಿಮಗೆ ಗೊತ್ತಾ ಹಾವುಗಳು ಕೂಡ ಕೆಲವೊಂದು ವಿಚಾರಗಳಲ್ಲಿ ಹೆದರುವುದುಂಟು, ಹಾವುಗಳಿಗೂ ಕೂಡ ಭಯ ತರಿಸುವ ಕೆಲವು ವಿಷಯಗಳು ಇವೆ. ಇದರ ಬಗ್ಗೆ ನೀವೆನಾದರು ಮೊದಲೇ ತಿಳಿದುಕೊಂಡರೇ ಹಾವುಗಳ ದಾಳಿಯಿಂದ ಸುಲಭವಾಗಿ ಪಾರಾಗಬಹುದು. ನಿಮ್ಮ ಮನೆ ಹತ್ತಿರ ಹಾವು ಸುಳಿಯುವುದನ್ನೂ ಸಹ ತಪ್ಪಿಸಬಹುದು.
ಹಾವುಗಳಿಗೆ ಮನುಷ್ಯನಿಗಿಂತ ನೂರು ಪಟ್ಟು ಧೈರ್ಯ ಮತ್ತು ಹೆದರಿಕೆ ಎರಡೂ ಇರುತ್ತವೆ. ಅದೇ ರೀತಿ ಹಾವುಗಳು ಶಾಂತ ಸ್ವಭಾವದ ಜೀವಿಗಳು. ಅವುಗಳಿಗೆ ಮೊದಲಿಗೆ ದಾಳಿ ಮಾಡುವ ಉದ್ದೇಶವಿರುವುದಿಲ್ಲ; ಮನುಷ್ಯನ ಕೆಲವು ನಡುವಳಿಕೆಗಳು ಹಾವುಗಳಿಗೆ ಭಯ ಹುಟ್ಟಿಸುವಂತೆ ಮಾಡುತ್ತವೆ. ಆದ ಕಾರಣ ಹಾವುಗಳು ತಮ್ಮನ್ನು ರಕ್ಷಿಸಿಕೊಳ್ಳಲು ಮನುಷ್ಯನ ಮೇಲೆ ದಾಳಿ ಮಾಡಲು ಮುಂದಾಗುತ್ತವೆ.
ನಮ್ಮ ದೇಶದಲ್ಲಿ ಹಾವುಗಳನ್ನು ದೇವರ ಸಮಾನವಾಗಿ ಕಾಣುತ್ತಾರೆ, ಅವುಗಳನ್ನು ಪೂಜಿಸುತ್ತಾರೆ, ಆದರೆ ಅದೇ ಹಾವು ಏನಾದರು ತೊಂದರೆ ಕೊಡಲು ಪ್ರಯತ್ನಿಸಿದಾಗ ಅದನ್ನು ಹೊಡೆದು ಸಾಯಿಸಲು ಮುಂದಾಗುತ್ತಾರೆ. ಇದು ಸರಿಯಲ್ಲ, ಬದಲಾಗಿ ಹಾವುಗಳನ್ನು ಓಡಿಸಲು ಕೆಲವು ಮಾರ್ಗಗಗಳಿವೆ ಅವನ್ನು ಪಾಲಿಸಬೇಕಷ್ಟೆ.
ಇದನ್ನೂ ಓದಿ- ಚೇಳು ಕಚ್ಚಿದ ಕೂಡಲೇ ಹೀಗೆ ಮಾಡಿದ್ರೆ 'ವಿಷ' ಮೈಗೇರಲ್ಲ...!
ಹಾವುಗಳು ಸೂಕ್ಷ್ಮ ಜೀವಿಯಾಗಿರುವುದರಿಂದ ಕೆಲವು ವಾಸನೆಗಳನ್ನು ಅವುಗಳಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಹಾವುಗಳು ಆದಷ್ಟು ಆ ವಾಸನೆ ಹರಡಿರುವ ಜಾಗದಿಂದ ಹೊರಬರಲು ಪ್ರಯತ್ನಿಸುತ್ತವೆ. ಹಾವುಗಳ ಈ ದೌರ್ಬಲ್ಯವನ್ನು ಬಳಸಿಕೊಂಡು ತೊಂದರೆ ಕೊಡದೇ ಅವುಗಳನ್ನು ನಮ್ಮ ಜಾಗದಿಂದ ಓಡಿಸಬಹುದು.
ನಾವು ದಿನನಿತ್ಯ ಉಪಯೋಗಿಸುವ ವಸ್ತುಗಳನನ್ನು ಬಳಸಿಕೊಂಡು ಈ ತೊಂದರೆಗೆ ಪರಿಹಾರ ಕಂಡುಕೊಳ್ಳಬಹುದು. ದಿನಬಳಕೆಯ ಫಿನಾಯಿಲ್, ವಿನೆಗರ್ ಅಥವಾ ಸೀಮೆಎಣ್ಣೆಯನ್ನು ಮನೆಯ ಸುತ್ತ ಸಿಂಪಡಿಸುವುದು. ಅಷ್ಟೇ ಅಲ್ಲದೇ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಸುಲಭವಾಗಿ ಸಿಗುವ ಬೆಳ್ಳುಳ್ಳಿ, ನಿಂಬೆ, ದಾಲ್ಚಿನ್ನಿ ಮತ್ತು ಪುದೀನಗಳನ್ನು ಬಳಸಿಕೊಂಡು ಅವುಗಳ ವಾಸನೆ ಮನೆಯ ತುಂಬೆಲ್ಲಾ ಹರಡುವಂತೆ ಮಾಡಿದರೆ ನಿಮ್ಮ ಮನೆಯನ್ನು ಹಾವುಗಳ ದಾಳಿಯಿಂದ ಕಾಪಾಡಿಕೊಳ್ಳಬಹುದು.
ಹಾವುಗಳ ಬಗ್ಗೆ ಇರುವ ಆಸಕ್ತಿದಾಯಕ ವಿಷಯವೇನೆಂದರೆ ಅವುಗಳಿಗೆ ಕಿವಿ ಕೇಳುವುದಿಲ್ಲ, ಹಾಗೂ ಅವುಗಳ ಕಣ್ಣಿನ ರೆಪ್ಪೆಗಳು ತುಂಬಾ ತೆಳುವಾಗಿರುತ್ತವೆ, ಇದರಿಂದ ಅವುಗಳು ಕಣ್ಣುಗಳನ್ನು ಮುಚ್ಚಿವೆಯೋ ಅಥವಾ ತೆಗೆದಿವೆಯೋ ಎಂದು ಸಹ ನಮಗೆ ಗೊತ್ತಾಗುವುದಿಲ್ಲ. ಸಾಮಾನ್ಯವಾಗಿ ಹಾವುಗಳು ದೊಡ್ಡ ಸಪ್ಪಳಕ್ಕೆ ಹೆದರುತ್ತವೆ. ಹಾಗಾಗಿ ಹೆಚ್ಚಿನ ಶಬ್ಧಕ್ಕೆ ಹಾವುಗಳು ಓಡಿಹೊಗುತ್ತವೆ.
ಇದನ್ನೂ ಓದಿ- ಹಾವು ಕಚ್ಚಿದ ತಕ್ಷಣ ಇದೊಂದು ಕೆಲಸ ಮಾಡಿದ್ರೆ ಸಾಕು ದೇಹ ಸೇರಲ್ಲ ವಿಷ! ಜೀವ ಉಳಿಸುವ ಏಕೈಕ ಪರಮಮಾರ್ಗವಿದು..
ಹಾವುಗಳು ಇದಷ್ಟೇ ಅಲ್ಲದೆ ಹೊಗೆಗೂ ಸಹ ಹಾವುಗಳು ಹೆದರುತ್ತವೆ. ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ಶಕ್ತಿ ಹಾವುಗಳಿಗೆ ಇರುವುದಿಲ್ಲ. ಆದ್ದರಿಂದ ಹಾವುಗಳು ಅಡಗಿಕೊಂಡಿರುವ ಜಾಗದಲ್ಲಿ ಹೊಗೆಯನ್ನು ಹಾಕಿದಾಗ ಅಥವಾ ಬೆಂಕಿ ತಗುಲಿಸಿದಾಗ ತಕ್ಷಣ ಹೊರಗೆ ಬರುತ್ತವೆ. ಈ ರೀತಿ ಸುಲಭ ಮಾರ್ಗಗಳನ್ನು ಬಳಸಿಕೊಂಡು ಹಾವುಗಳಿಗೆ ಹಾನಿ ಮಾಡದೇ ಅವುಗಳನ್ನು ಓಡಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









