Solar Eclipse 2023 Effect: 2023 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ಸಂಭವಿಸಲಿದೆ. ಸೂರ್ಯಗ್ರಹಣ-ಚಂದ್ರಗ್ರಹಣವನ್ನು ಹಿಂದೂ ಧರ್ಮದಲ್ಲಿ ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ, ಹೀಗಾಗಿ ಗ್ರಹಣದ ಅವಧಿಯಲ್ಲಿ ಯಾವುದೇ ಮಂಗಳಕರ ಕೆಲಸ ಮತ್ತು ಪೂಜೆ ನಡೆಸಲಾಗುವುದಿಲ್ಲ. ಗ್ರಹಣದ ಸಮಯದಲ್ಲಿ ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಏಪ್ರಿಲ್ 2023 ರಲ್ಲಿ ಗ್ರಹಣವು ಮೇಷ ರಾಶಿಯಲ್ಲಿ ಸಂಭವಿಸುತ್ತಿದ್ದು, ಈ ಗ್ರಹಣವು ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರಲಿದೆ. ಸೂರ್ಯಗ್ರಹಣವು ಯಾವ ರಾಶಿಗಳ ಜನರ ಮೇಲೆ ಅಶುಭ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿಯೋಣ ಬನ್ನಿ,


COMMERCIAL BREAK
SCROLL TO CONTINUE READING

ಏಪ್ರಿಲ್ ತಿಂಗಳ ಸೂರ್ಯಗ್ರಹಣವು 3 ರಾಶಿಗಳ ಜನರಿಗೆ ಅಶುಭವಾಗಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸೂರ್ಯಗ್ರಹಣವು ಮೇಷ, ಕನ್ಯಾ, ಸಿಂಹ ರಾಶಿಯವರಿಗೆ ಒಳ್ಳೆಯದಲ್ಲ ಎಂದು ಹೇಳಲಾಗಿದೆ. ಈ ಸೂರ್ಯಗ್ರಹಣವು ಈ 3 ರಾಶಿಗಳ ಜನರಿಗೆ ಹಾನಿಯನ್ನುಂಟುಮಾಡುತ್ತದೆ. ಈ ಗ್ರಹಣವು ಮೇಷ ರಾಶಿಯಲ್ಲಿ ನಡೆಯುತ್ತಿರುವುದರಿಂದ, ಈ ರಾಶಿಯ ಸ್ಥಳೀಯರ ಮೇಲೆ ಇದು ಅತ್ಯಂತ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಈ 3 ರಾಶಿಗಳ ಜನರು ಕೆಲಸದಲ್ಲಿ ಅಡಚಣೆ, ಒತ್ತಡ, ಹಣದ ನಷ್ಟವನ್ನು ಎದುರಿಸಬೇಕಾಗಬಹುದು.


ಇದನ್ನೂ ಓದಿ-ಮೂರು ದಶಕಗಳ ಬಳಿಕ ಶನಿ-ಗುರುವಿನ ವಿಶೇಷ ಸಂಯೋಜನೆ, 4 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!


ನೀವು ವಿದೇಶ ಪ್ರವಾಸ ಮಾಡುತ್ತಿದ್ದರೆ ಜಾಗರೂಕರಾಗಿರಿ
20 ಏಪ್ರಿಲ್ 2023 ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹೀಗಾಗಿ ಅದರ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ ಮತ್ತು ಅದು ಜನರ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಈ ಸೂರ್ಯಗ್ರಹಣವು ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದಂತಹ ಸ್ಥಳಗಳಲ್ಲಿ ಗೋಚರಿಸಲಿದೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯಗ್ರಹಣದ ಸಮಯದಲ್ಲಿ ಈ ಸ್ಥಳಗಳಲ್ಲಿ ಇರುವ ಜನರ ಮೇಲೆ ಪರಿಣಾಮ ಬೀರುತ್ತದೆ. ಮೇಷ, ಕನ್ಯಾ ಮತ್ತು ಸಿಂಹ ರಾಶಿಯ ಜನರು ಏಪ್ರಿಲ್‌ನಲ್ಲಿ ಈ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದರೆ, ಸೂರ್ಯಗ್ರಹಣದ ಸಮಯದಲ್ಲಿ ವಿಶೇಷ ಕಾಳಜಿವಹಿಸಿ, ಇದರಿಂದ ನೀವು ಸಂಭವನೀಯ ಹಾನಿಯಿಂದ ಪಾರಾಗಬಹುದು.


ಇದನ್ನೂ ಓದಿ-Luxury Life Loving Girls: ಐಶಾರಾಮಿ ಜೀವನ ಇಷ್ಟಪಡ್ತಾರಂತೆ ಈ 4 ರಾಶಿಯ ಪೋರಿಗಳು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.