Chanakya Niti Shastra: ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಮನುಷ್ಯರ ಕರ್ಮಗಳಿಂದ ಹಿಡಿದು ಅವರ ಭವಿಷ್ಯದವರೆಗಿನ ಅನೇಕ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಚಾಣಕ್ಯ ನೀತಿಯಲ್ಲಿ, ಯಾವ ಜನರು ಜನರು ತಮ್ಮ ಜೀವನದಲ್ಲಿ ಸಮಯಕ್ಕೂ ಮುನ್ನವೇ ವೃದ್ಧರಾಗುತ್ತಾರೆ ಮತ್ತು ಅವರ ಕರ್ಮಗಳು ಹೇಗಿರುತ್ತವೆ ಎಂಬುದನ್ನು ಸಹ ಉಲ್ಲೇಖಿಸಿದ್ದಾರೆ. ಇದರ ಜೊತೆಗೆ, ಅವರು ಕೆಲ ಪರಿಹಾರಗಳನ್ನು ಸಹ ಸೂಚಿಸಿದ್ದಾರೆ, ಚಾಣಕ್ಯ ಸೂಚಿಸಿರುವ ಈ ಪರಿಹಾರಗಳನ್ನು ನೀವೂ ಕೂಡ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬೇಗ ವಯಸ್ಸಾಗುವಿಕೆಯಿಂದ ಪಾರಾಗಬಹುದು.


COMMERCIAL BREAK
SCROLL TO CONTINUE READING

ಹೆಚ್ಚು ಪ್ರಯಾಣ ಮಾಡುವ ಜನರು ಬೇಗನೆ ವೃದ್ಧರಾಗುತ್ತಾರೆ
ಆಚಾರ್ಯ ಚಾಣಕ್ಯ
ಅವರ ಪ್ರಕಾರ, ಹೆಚ್ಚು ಪ್ರಯಾಣ ಮಾಡುವ ಜನರು ಬೇಗನೆ ವೃದ್ಧರಾಗುತ್ತಾರೆ. ಏಕೆಂದರೆ, ಅಂತಹವರ ದಿನಚರಿ ಸರಿಯಾಗಿರುವುದಿಲ್ಲ ಎಂಬುದ ಅವರ ಅಭಿಪ್ರಾಯ ಮತ್ತು ಅಂತಹ ಜನರು ತಮ್ಮ ಆಹಾರದ ಬಗ್ಗೆಯೂ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಅಂದರೆ, ಯಾರ ಜೀವನವು ಹೆಚ್ಚು ರನ್-ಆಫ್-ಮಿಲ್ ಆಗಿರುತ್ತದೆಯೋ, ಅವರು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ, ಅಂತಹ ಜನರು ತಮ್ಮ ಸಮಯಕ್ಕಿಂತ ಮುಂಚೆಯೇ ವಯಸ್ಸಾದವರಂತೆ ಕಾಣಲು ಪ್ರಾರಂಭಿಸುತ್ತಾರೆ.


ಶಾರೀರಿಕ ಸುಖ ಸಿಗದ ಹೆಣ್ಣು ಬೇಗ ವೃದ್ಧರಾಗುತ್ತಾರೆ
ಕಾಲಕಾಲಕ್ಕೆ ಶಾರೀರಿಕ ಸುಖ ಸಿಗದ ಹೆಂಗಸರು ಬೇಗ ಮುದುಕರಾಗುತ್ತಾರೆ ಎಂದು ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಆಚಾರ್ಯ ಚಾಣಕ್ಯರು ಕಾಲಕಾಲಕ್ಕೆ ಶಾರೀರಿಕ ಸುಖವನ್ನು ಪಡೆಯದ ಇಂತಹ ಮಹಿಳೆಯರು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.


ಇದನ್ನೂ ಓದಿ-Kuber Yantra Niyam: ಕೆಲವೇ ದಿನಗಳಲ್ಲಿ ಹಣಕಾಸಿನ ಮುಗ್ಗಟ್ಟಿಗೆ ಅಂತ್ಯ ಹಾಡಲು ಈ ಉಪಾಯ ಅನುಸರಿಸಿ


ಕಟ್ಟಿದ ಕುದುರೆ ಬೇಗ ಮುದಿಯಾಗುತ್ತದೆ
ಚಾಣಕ್ಯ ನೀತಿಯಲ್ಲಿ ಹೇಳಿರುವಂತೆ ದೀರ್ಘ ಕಾಲ ಕಟ್ಟಿರುವ ಸ್ಥಿತಿಯಲ್ಲಿರುವ ಕುದುರೆ ತನ್ನ ವಯಸ್ಸಿಗಿಂತ ಮುಂಚೆಯೇ ಮುದಿಯಾಗುತ್ತದೆ ಎನ್ನಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ ಕುದುರೆಯ ಕೆಲಸವೆಂದರೆ ಓಡುವುದು ಮತ್ತು ಕಷ್ಟಪಟ್ಟು ಕೆಲಸ ಮಾಡುವುದು, ಆದರೆ ಅದನ್ನು ತ್ಯಜಿಸಿ ಯಾವಾಗಲೂ ಅದನ್ನು ಕಟ್ಟಿಹಾಕಿದರೆ ಅದು ಬೇಗನೆ ಮುದಿಯಾಗುತ್ತದೆ.


ಇದನ್ನೂ ಓದಿ-Chanakya Niti: ಪತಿ-ಪತ್ನಿ ನಿತ್ಯ ಈ ಕೆಲಸ ಮಾಡಿದರೆ ಸಂಬಂಧದಲ್ಲಿ ಎಂದಿಗೂ ಬಿರುಕು ಕಾಣಿಸಿಕೊಳ್ಳುವುದಿಲ್ಲ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.