ನವದೆಹಲಿ : ತಾಯಿ ಲಕ್ಷ್ಮಿಯ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಯಾರು ತಾನೇ ಬಯಸುವುದಿಲ್ಲ. ಮಹಾ ಲಕ್ಷ್ಮೀ ಸಂತೋಷದಿಂದ ಇದ್ದರೆ, ಮನೆಯಲ್ಲಿ ಸದಾ ಸಂಪತ್ತಿನ ಆಗಮನವಾಗುತ್ತದೆ. ಮನೆಯಲ್ಲಿ ಯಾವುದಕ್ಕೂ ಕೊರತೆಯಿರುವುದಿಲ್ಲ. ಜೀವನವು  ಸಂತೋಷದಿಂದ ಕೂಡಿರುತ್ತದೆ. ಕುಟುಂಬದ ಪ್ರತಿಯೊಬ್ಬರ  ಆಸೆ ಈಡೇರುತ್ತದೆ. 


COMMERCIAL BREAK
SCROLL TO CONTINUE READING

ಲಕ್ಷ್ಮಿ ದೇವಿಯ (Godess Lakshmi) ಕೃಪೆಗೆ ಪಾತ್ರರಾಗಬೇಕಾದರೆ ಕೆಲವೊಂದು ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ.  ಗ್ರಂಥಗಳಲ್ಲಿಯೂ ಇದನ್ನು ತಿಳಿಸಲಾಗಿದೆ.  ಈ ಕೆಳಗಿನ ಮಾರ್ಗಗಳನ್ನು ಅನುಸರಿಸುವುದರಿಂದ ಸಿರಿಲಕ್ಷ್ಮಿಯ ಅನುಗ್ರಹವನ್ನು ಖಂಡಿತವಾಗಿ ಪಡೆಯಬಹುದು ಎನ್ನಲಾಗಿದೆ. 


ಇದನ್ನೂ ಓದಿ :  Guru Purnima 2021 ಈ ದಿನ ಗುರು ಪೌರ್ಣಿಮೆ ಆಚರಿಸಲಾಗುವುದು, ಇಲ್ಲಿದೆ ಶುಭ ಮುಹೂರ್ತ ಹಾಗೂ ಮಹತ್ವ


ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವ ಮಾರ್ಗಗಳು : 
೧. ಶುಕ್ರವಾರ (Friday) ಒಂದು ಬೀಗವನ್ನು ಖರೀದಿಸಬೇಕು. ಆ ಬೀಗ ಕಬ್ಬಿಣದ್ದು ಅಥವಾ ಸ್ಟೀಲ್ ಯಾವುದಾದರು ಆಗಿರಬಹುದು.  ಬೀಗವನ್ನು ತೆಗಿಯಬೇಡಿ, ಅಥವ  ಅಂಗಡಿಯಾವನಿಗೂ ಬೀಗ ತೆಗೆಯುವಂತೆ ಹೇಳಬೇಡಿ. ಹಾಗೆ ಮುಚ್ಚಿರುವ ಅಂದರೆ ಬಂದ್ ಆಗಿರುವ ಬೀಗವನ್ನು ತಂದು ನೀವು ಮಲಗುವ ಜಾಗದಲ್ಲಿ ಇರಿಸಿಕೊಳ್ಳಿ. ಶನಿವಾರ (Saturday) ಅದನ್ನು ಯಾವುದಾದರು ಒಂದು ದೇವಸ್ಥಾನದ ಬಳಿ ಬಿಟ್ಟು ಬನ್ನಿ. ಹೀಗೆ ಬಿಟ್ಟು ಬಂದ ಬೀಗವನ್ನು ಯಾರಾದರು ತೆರೆದರೆ ನಿಮ್ಮ ಅದೃಷ್ಟ ಕೂಡ ತೆರೆದಂತೆಯೇ.   
2. ಚಿನ್ನ (Gold) ಮತ್ತು ಕೇಸರಿಯನ್ನು ಒಟ್ಟಿಗೆ ಇರಿಸಿ. ಇದರಿಂದಾಗಿ ಲಕ್ಷ್ಮಿಯ ಅನುಗ್ರಹವಾಗುತ್ತದೆ. 
3. ಅಶ್ವಥ ಮರದ (Peeple tree) ಕೆಳಗೆ ಶನಿವಾರ ತುಪ್ಪದ ದೀಪವನ್ನು ಬೆಳಗಿಸಿ. ಪರಿಮಳಯುಕ್ತ ಧೂಪದ್ರವ್ಯಗಳನ್ನು ಕೂಡಾ ಬೆಳಗಿ.  
4. ಒಂಬತ್ತು ಕನ್ಯೆಯರಿಗೆ ಹಸಿರು ಬಟ್ಟೆಯನ್ನು ದಾನ ಮಾಡಿ. ಹೀಗೆ ಮಾಡುವುದರಿನದ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳಂತೆ. 


ಇದನ್ನೂ ಓದಿ :  ಶ್ರಾವಣ ಮಾಸದಲ್ಲಿ ಮಹಾಶಿವನ ಪೂಜೆಯ ವೇಳೆ ಈ ವಿಚಾರಗಳು ತಿಳಿದಿರಲಿ, ಶಿವನ ಪೂಜೆ ವೇಳೆ ಈ ವಸ್ತುಗಳ ಬಳಕೆ ನಿಷಿದ್ಧ


5. ರೊಟ್ಟಿಗೆ ತುಪ್ಪವನ್ನು (Ghee) ಹಚ್ಚಿ ಶನಿವಾರ ಅದನ್ನು ನಾಯಿಗೆ ತಿನ್ನಲು ನೀಡಬೇಕು.  ಹೀಗೆ ಮಾಡಿದರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಮುಕ್ತವಾಗುತ್ತದೆ.
6. 5 ಕೆಜಿ ಹಿಟ್ಟು ಮತ್ತು 1.25 ಕೆಜಿ ಬೆಲ್ಲವನ್ನು ಖರೀದಿಸಿ. ಅದರಿಂದ ರೊಟ್ಟಿಗಳನ್ನು ಮಾಡಿ. ಈ ರೊಟ್ಟಿಗಳನ್ನು ಗುರುವಾರ ಸಂಜೆ ಹಸುವಿಗೆ ನೀಡಿ. ಮೂರು ಗುರುವಾರಗಳವರೆಗೆ ಇದನ್ನು ನಿಯಮಿತವಾಗಿ ಮಾಡಿ.
7. 21 ಶುಕ್ರವಾರ ಸಿಹಿ ಮಾಡಿ ಆ ಪ್ರಸಾದವನ್ನು ಐದು ಕನ್ಯೆಯರಿಗೆ  ದಾನ ಮಾಡಿ. 
8. ಮನೆ, ಅಂಗಡಿ ಅಥವಾ ಶೋ ರೂಂನಲ್ಲಿ ಅಲಂಕಾರಿಕ ಕಾರಂಜಿ ಇರಿಸಿ.
9. ಶಕ್ತಿಯುತ ಶ್ರೀ ಯಂತ್ರವನ್ನು ಪೂಜಾ ಮನೆಯಲ್ಲಿ ಇರಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ