ಮನೆಯಂಗಳದಲ್ಲಿ ತುಳಸಿ ಗಿಡ ಬಾಡಿ ಹೋಗ್ತಿದ್ಯಾ? ಹಾಗಾದ್ರೆ ಈ ಸುಲಭ ಟಿಪ್ಸ್‌ ಅನುಸರಿಸಿ... ದಟ್ಟವಾಗಿ ಹಚ್ಚಹಸಿರಾಗಿ ಬೆಳೆಯುತ್ತದೆ

Tulsi Plant Gardening Tips: ಆಯುರ್ವೇದವು ತುಳಸಿಯನ್ನು ಉತ್ತಮ ಔಷಧವೆಂದು ವಿವರಿಸುತ್ತದೆಯಾದರೂ, ಪುರಾಣಗಳಲ್ಲಿಯೂ ಅದರ ಮಹತ್ವವನ್ನು ಬಹಳವಾಗಿ ಗುರುತಿಸಲಾಗಿದೆ. ಕೆಲವೊಮ್ಮೆ ತುಳಸಿ ಗಿಡ ಸರಿಯಾಗಿ ಬೆಳೆಯದೆ ಒಣಗಿ ಹೋಗುತ್ತದೆ

Written by - Bhavishya Shetty | Last Updated : Mar 8, 2025, 01:19 PM IST
    • ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
    • ಪುರಾಣಗಳಲ್ಲಿಯೂ ಅದರ ಮಹತ್ವವನ್ನು ಬಹಳವಾಗಿ ಗುರುತಿಸಲಾಗಿದೆ
    • ಕೆಲವು ಮನೆಯಲ್ಲಿ ತುಳಸಿ ಗಿಡ ಸರಿಯಾಗಿ ಬೆಳೆಯುವುದಿಲ್ಲ
ಮನೆಯಂಗಳದಲ್ಲಿ ತುಳಸಿ ಗಿಡ ಬಾಡಿ ಹೋಗ್ತಿದ್ಯಾ? ಹಾಗಾದ್ರೆ ಈ ಸುಲಭ ಟಿಪ್ಸ್‌ ಅನುಸರಿಸಿ... ದಟ್ಟವಾಗಿ ಹಚ್ಚಹಸಿರಾಗಿ ಬೆಳೆಯುತ್ತದೆ
Tulsi plant gardening tips

Tulsi Plant Gardening Tips: ಹಿಂದೂ ಧರ್ಮಕ್ಕೆ ಸೇರಿದ ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡ ಇರುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆದರೆ ಕೆಲವು ಮನೆಯಲ್ಲಿ ತುಳಸಿ ಗಿಡ ಸರಿಯಾಗಿ ಬೆಳೆಯುವುದಿಲ್ಲ ಅಥವಾ ತುಳಸಿ ಗಿಡ ಮತ್ತೆ ಮತ್ತೆ ಒಣಗುತ್ತಲೇ ಇರುತ್ತದೆ. ತುಳಸಿಗೆ ಧಾರ್ಮಿಕ ಪ್ರಾಮುಖ್ಯತೆಯೂ ಇರುವುದರಿಂದ, ತುಳಸಿ ಗಿಡ ಒಣಗುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ.

Add Zee News as a Preferred Source

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದರೆ ಟೀಂ ಇಂಡಿಯಾಗೆ ಸಿಗಲಿರುವ ಒಟ್ಟು ಬಹುಮಾನ ಮೊತ್ತ ಎಷ್ಟು?

ಆಯುರ್ವೇದವು ತುಳಸಿಯನ್ನು ಉತ್ತಮ ಔಷಧವೆಂದು ವಿವರಿಸುತ್ತದೆಯಾದರೂ, ಪುರಾಣಗಳಲ್ಲಿಯೂ ಅದರ ಮಹತ್ವವನ್ನು ಬಹಳವಾಗಿ ಗುರುತಿಸಲಾಗಿದೆ. ಕೆಲವೊಮ್ಮೆ ತುಳಸಿ ಗಿಡ ಸರಿಯಾಗಿ ಬೆಳೆಯದೆ ಒಣಗಿ ಹೋಗುತ್ತದೆ ಅಥವಾ ಕೊಳೆಯಲು ಪ್ರಾರಂಭಿಸುತ್ತದೆ. ನೀವು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸಲಹೆಗಳು ನಿಮಗೆ ಪ್ರಯೋಜನಕಾರಿಯಾಗಬಹುದು.

ತುಳಸಿ ಗಿಡವನ್ನು ನೆಡುವಾಗ, ಅತಿಯಾದ ನೀರುಹಾಕುವುದರಿಂದ ಅದರ ಬೇರುಗಳಲ್ಲಿ ಶಿಲೀಂಧ್ರ ಬೆಳೆಯುತ್ತದೆ . ಇದೇ ಕಾರಣಕ್ಕೆ ತುಳಸಿ ಗಿಡವನ್ನು ನೆಡುವಾಗ, ಅದನ್ನು ಕೇವಲ ಮಣ್ಣಿನಲ್ಲಿ ನೆಡದೆ, 70% ಮಣ್ಣು ಮತ್ತು 30% ಮರಳನ್ನು ಬಳಸುವಂತೆ ನೋಡಿಕೊಳ್ಳಬೇಕು.

ಭಾರತದಲ್ಲಿ ಹಸುವಿಗೆ ಅಪಾರ ಪ್ರಾಮುಖ್ಯತೆ ಇದೆ ಮತ್ತು ಹಸುವಿನ ಸಗಣಿ ಉತ್ತಮ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ. ಇನ್ನು ಹಸುವಿನ ಸೆಗಣಿ ಒಣಗಿದ ನಂತರ, ಅದರ ಪುಡಿ ರೂಪವನ್ನು ಮಣ್ಣಿನಲ್ಲಿ ಹಾಕಬೇಕು. ಇದು ನೈಸರ್ಗಿಕ ಗೊಬ್ಬರವಾಗಿ ಕೆಲಸ ಮಾಡುತ್ತದೆ. ತುಳಸಿ ಬೇಗನೆ ಬೆಳೆಯಲು ಸಹಾಯ ಮಾಡುತ್ತದೆ.

ಮಡಕೆ ಸ್ವಲ್ಪ ಆಳ ಮತ್ತು ಅಗಲವಾಗಿರಬೇಕು. ಅದರ ಕೆಳಭಾಗದಲ್ಲಿ ಎರಡು ದೊಡ್ಡ ರಂಧ್ರಗಳಿರಬೇಕು. ತುಳಸಿ ನೆಡುವಾಗ ಕೆಳಭಾಗದಲ್ಲಿ ಒಂದು ಕಾಗದವನ್ನು ಇರಿಸಿ . ಅದರಲ್ಲಿ ಮೇಲೆ ತಿಳಿಸಲಾದ ಗೊಬ್ಬರದ ಮಣ್ಣನ್ನು ಮಿಶ್ರಣ ಮಾಡಿ. ಇದರಲ್ಲಿ ತುಳಸಿ ಗಿಡವನ್ನು ನೆಡಬೇಕು. ಇನ್ನು ಮೊದಲ ಬಾರಿಗೆ ತುಳಸಿ ಗಿಡಕ್ಕೆ ಸರಿಯಾಗಿ ನೀರು ಹಾಕಿ. ನಂತರ, ಮಣ್ಣು ತೇವವಾಗಿರುವವರೆಗೆ ಬಿಡಿ. ಚಳಿಗಾಲದಲ್ಲಿ, 4-5 ದಿನಗಳಿಗೊಮ್ಮೆ ಸಸ್ಯಕ್ಕೆ ನೀರು ಹಾಕಬಹುದು.

ತುಳಸಿ ಗಿಡವನ್ನು ಚಿವುಟುವುದು ಬಹಳ ಮುಖ್ಯ. ಅಂದರೆ, ನೆಟ್ಟು ಒಂದು ವಾರವಾದಾಗ, ಮೇಲಿನ ಎಲೆಗಳನ್ನು ಕೀಳಬೇಕು. ಇದು ಸಸ್ಯವು ಮೇಲಿನಿಂದ ಮಾತ್ರ ಬೆಳೆಯುವುದಿಲ್ಲ, ಬದಲಾಗಿ ಅದರ ಇತರ ಎಲೆಗಳಿಂದಲೂ ಬೆಳೆಯಲು ಕಾರಣವಾಗುತ್ತದೆ. ಅಂದಹಾಗೆ ತುಳಸಿ ಬೀಜಗಳು ಸಸ್ಯದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದರೆ, ಅವುಗಳನ್ನು ತೆಗೆದುಹಾಕಬೇಕು. ಇದು ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಇನ್ನೊಂದು ಸುಲಭ ವಿಧಾನವೆಂದರೆ, ಸಾಮಾನ್ಯವಾಗಿ ಮುಂಜಾನೆ ತಿಂಡಿ ತಯಾರಿಕೆಗೆ ಬೆಳ್ತಿಗೆ ಅಕ್ಕಿ ಬಳಸಲಾಗುತ್ತದೆ. ಇದನ್ನು ತೊಳೆದ ನೀರನ್ನು ತುಳಸಿಗೆ ಹಾಕಿದರೆ ಸೊಂಪಾಗಿ ದಟ್ಟವಾಗಿ ಬೆಳೆಯುತ್ತದೆ. ಮೊದಲ ಸಲ ತೊಳೆದ ನೀರನ್ನಷ್ಟೆ ಬಳಕೆ ಮಾಡಬೇಕು.

ಇದನ್ನೂ ಓದಿ: ಕಬ್ಬಿನ ರಸ vs ತೆಂಗಿನ ನೀರು.. ಬಿಸಿಲಿನಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?

 ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News