Eyelash extensions : ಸುಂದರವಾಗಿ ಕಾಣಬೇಕು ಎನ್ನುವುದು ಪ್ರತಿ ಮಹಿಳೆಯ ಬಯಕೆ. ಒಬ್ಬ ಮಹಿಳೆ ಅಥವಾ ಯುವತಿ ಸುಂದರವಾಗಿ ಕಾಣಲು ಪಾರ್ಲರ್‌ಗಳಲ್ಲಿ ಸಾಕಷ್ಟು ಹಣ ವ್ಯಯ ಮಾಡುತ್ತಾಳೆ. ಅಲ್ಲದೇ ದುಬಾರಿ ಮೇಕಪ್‌ ಐಟಮ್‌ಗಳನ್ನು ಖರೀದಿಸುತ್ತಾಳೆ. ಆ ಮೇಕಪ್‌ ಉತ್ಪನ್ನಗಳಲ್ಲಿ ಐಲ್ಯಾಶಸ್‌ ಕೂಡ ಒಂದು. 


COMMERCIAL BREAK
SCROLL TO CONTINUE READING

ಈ ಐಲ್ಯಾಶಸ್‌ ನೋಡಲು ಸುಂದರವಾಗಿ ಕಾಣುತ್ತದೆ ಆದರೆ ಅದು ನಿಮ್ಮ ಕಣ್ಣುಗಳ ಮೇಲೆ ಅಡ್ಡ ಪರಿಣಾಮವನ್ನೂ ಬೀರಬಹುದು. ಹೌದು ಸಾಕಷ್ಟು ಮೇಕಪ್‌ ಐಟಮ್‌ಗಳು ಹೆಚ್ಚು ಅಡ್ಡಪರಿಣಾಮ ಬೀರುತ್ತವೆ. ಹಾಗಾದರೆ ಈ ಐಲ್ಯಾಶಸ್‌ನಿಂದಾಗುವ ಸಮಸ್ಯೆಗಳೇನು ಎನ್ನುವುದನ್ನು ತಿಳಿಯಲು ಮುಂದೆ ಓದಿ....


ಕಣ್ಣಿನ ಕಿರಿಕಿರಿಗೆ ಕಾರಣವಾಗಬಹುದು 
ದೀರ್ಘಕಾಲದವರೆಗೆ ಈ ಐಲ್ಯಾಶಸ್‌ನ್ನು ಬಳಸುವವರಿಗೆ ಅದು ಉಂಟುಮಾಡುವ ಅಸ್ವಸ್ಥತೆ ಮತ್ತು ತುರಿಕೆ ಬಗ್ಗೆ ನೀವು ಈಗಾಗಲೇ ತಿಳಿದಿರುವ ಸಾಧ್ಯತೆಯಿದೆ. ಕಣ್ಣಿನರೆಪ್ಪೆಗಳ ಸುತ್ತಲಿನ ಚರ್ಮ ಸೂಕ್ಷ್ಮವಾಗಿರುತದೆ. ಆದ್ದರಿಂದ ಈ ಐಲ್ಯಾಶಸ್‌ನ್ನು ನಾವು ಕಣ್ಣಿನ ರೆಪ್ಪೆಗಳ ಮೇಲೆ ಅಂಟಿಸಿದಾಗ ಅದರಲ್ಲಿರುವ ರಾಸಾಯನಿಕ ಸಂಯುಕ್ತಗಳಿಂದ ಕಣ್ಣಿನ ಕಿರಿಕಿರಿ ಉಂಟಾಗಬಹುದು. ಆದ್ದರಿಂದ ಆದಷ್ಟೂ ಅಂತಹ ಮೇಕಪ್‌ ಐಟಮ್‌ಗಳನ್ನು ನಿಯಮಿತವಾಗಿ ಬಳಸಿ ಅಥವಾ ಬಳಸುವುದನ್ನು ತಪ್ಪಿಸಿ. 


ಕಣ್ಣಿನ ಸೋಂಕು
ವೈಯಕ್ತಿಕ ನೈರ್ಮಲ್ಯ ಮನುಷ್ಯನಿಗೆ ಬಹಳ ಅಗತ್ಯ. ಹೌದು ಈ ಮೇಕಪ್‌ ವಿಚಾರದಲ್ಲಿಯೂ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು ಇಲ್ಲವಾದರೇ ಕಣ್ಣಿನ ಸೋಂಕಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೈರ್ಮಲ್ಯತೆ ಮೇಕಪ್‌ನಲ್ಲಿ ಹೇಗೆ ಅಂತೀರಾ..? ಹೌದು ಮೇಕಪ್‌ನಲ್ಲಿಯೂ ನೈರ್ಮಲ್ಯತೆ ಇದೆ. ಒಬ್ಬರು ಬಳಸಿರುವ ಬ್ರಷ್‌, ಐಲ್ಯಾಶಸ್‌ ಮುಂತಾದವುಗಳನ್ನು ಬಳಸುವುದರಿಂದ ಸೋಂಕು ತಗುಲಬಹುದು. ಮತ್ತು ಮೇಕಪ್‌ ಐಟಮ್‌ಗಳನ್ನು ಆದಷ್ಟು ಉತ್ತಮ ಜಾಗದಲ್ಲಿ ಧೂಳು ಬೀಳದ ರೀತಿಯಲ್ಲಿ ಇಡಲು ಪ್ರಯತ್ನಿಸಿ.


ಇದನ್ನೂ ಓದಿ-ತೂಕ ಇಳಿಕೆಗೆ ಬಲು ಪ್ರಯೋಜನಕಾರಿ ಈ ಬೆಳೆ, ಸೇವಿಸುವ ವಿಧಾನ ಇಂತಿರಲಿ!


ನೈಸರ್ಗಿಕ ರೆಪ್ಪೆಗಳಿಗೆ ಹಾನಿಯಾಗಬಹುದು 
ನೀವು ನಿಮ್ಮ ಕಣ್ಣುರೆಪ್ಪೆಗಳ ಮೇಲೆ ಐಲ್ಯಾಶಸ್‌ ಅಂಟಿಸುವ ಅಭ್ಯಾಸವನ್ನು ಅನುಸರಿಸುತ್ತಿರುವುದರಿಂದ ನಿಮ್ಮ ನೈಸರ್ಗಿಕ ರೆಪ್ಪೆಗಳು ಉದ್ದವಾಗಿ ಬೆಳೆಯದೇ ಇರಬಹುದು ಅಥವಾ ಇರುವ ರೆಪ್ಪೆಗಳು ಉದುರಿ ಹೋಗಲೂಬಹುದು. ಆದ್ದರಿಂದ ಈ ಐಲ್ಯಾಶಸ್‌ ಬಳಸುವ ಮುನ್ನ ಕಾಳಜಿ ವಹಿಸಿ. 


ಕಣ್ಣಿನಲ್ಲಿ ಉರಿ ಮತ್ತು ಊತ
ಈ ಮೇಕಪ್‌ ಐಟಮ್‌ಗಳಲ್ಲಿ ಸಾಕಷ್ಟು ಪ್ರಮಾಣದ ರಾಸಾಯನಿಕ ಸಂಯುಕ್ತಗಳು ಇರುತ್ತವೆ. ಅವುಗಳು ನಿಮ್ಮ ಸೌಂದರ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರಬಹುದು. ಅದರಂತೆಯೇ ಈ ಐಲ್ಯಾಶಸ್‌ ಸಹ ಇದನ್ನು ಬಳಸುವುದರಿಂದ ಕಣ್ಣಿನಲ್ಲಿ ಉರಿ ಮತ್ತು ಊತದಂತಹ ಸಂವೇದನೆಗಳನ್ನು ನೀವು ಅನುಭವಿಸಬಹುದು. 


ಮಸುಕಾದ ದೃಷ್ಟಿಗೆ ಕಾರಣವಾಗಬಹುದು
ಐಲ್ಯಾಶಸ್‌ಗಳಿಂದ ನೋಡಲು ಆಕರ್ಷಕವಾಗಿ ಕಂಡರು ಅವುಗಳಿಗೆ ಕಣ್ಣಿನ ದೃಷ್ಟಿಯನ್ನೇ ಕಿತ್ತುಕೊಳ್ಳುವಷ್ಟು ಸಾಮರ್ಥ್ಯವಿದೆ. ಹೌದು ಐಲ್ಯಾಶಸ್‌ನಿಂದ ಸೋಂಕುಗಳು ತಗುಲಿ ಕಣ್ಣಿನ ದೃಷ್ಟಿ ಮಂದವಾಗಬಹುದು ಮತ್ತು ಇರುಳು ಕುರುಡು ಸಮಸ್ಯೆಯೂ ಸಂಭವಿಸಬಹುದು. ಹಾಗಾಗಿ ಆದಷ್ಟು ಮುಖದ ಸೂಕ್ಷ್ಮ ಭಾಗಳಿಗೆ ಮೇಕಪ್‌ ಮಾಡುವುದನ್ನು ತಪ್ಪಿಸಿ. 


ಇದನ್ನೂ ಓದಿ-ಹೇರ್ ಕಲರ್ ಮಾಡಿದರೂ ಕೂದಲು ಹಾಳಾಗುವುದಿಲ್ಲ! ಈ ಮೂರು ವಿಧಾನ ಅನುಸರಿಸಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.