Vidur Niti: ಈ ಜನರು ಯಾವಾಗಲು ದುಃಖದಲ್ಲಿಯೇ ತನ್ನ ಜೀವನ ಕಳೆಯುತ್ತಾರೆ, ಇವರಲ್ಲಿ ನೀವಿಲ್ಲವಲ್ಲ?
Vidur Niti: ವಿದುರ ಹಸ್ತಿನಾಪುರದ ಸಾಮ್ರಾಟನಾಗಿದ್ದರು, ಜನ್ಮಾಂಧನಾಗಿದ್ದ ಧೃತರಾಷ್ಟ್ರನ ಮಲಸಹೊದರನಾಗಿದ್ದರು. ಬಾಲ್ಯದಿಂದಲೇ ವಿದುರ ಧೃತರಾಷ್ಟ್ರನ ಸಲಹೆಗಾರ ಹಾಗೂ ಮಾರ್ಗದರ್ಶಕರಾಗಿದ್ದರು.
Vidur Niti: ಮಹಾರಾಜ್ ಧೃತರಾಷ್ಟ್ರ ಹುಟ್ಟಿನಿಂದಲೇ ಅಂಧರಾಗಿದ್ದರು. ಜನರ ಒಳ್ಳೆಯತನ ಅಥವಾ ಕೆಟ್ಟತನ ಅವರಿಗೆ ಕಾಣಿಸುತ್ತಿರಲಿಲ್ಲ. ಯಾವುದೇ ಓರ್ವ ವ್ಯಕ್ತಿಯ ಬಗ್ಗೆ ಅವರು ಧ್ವನಿಯಿಂದ ಮಾತ್ರ ಗುರುತಿಸುತ್ತಿದ್ದರು. ಹೀಗಿರುವಾಗ ಮಹಾತ್ಮಾ ವಿದುರ ಅವರ ಚಕ್ಷುವಿನಂತೆ ಅವರ ಜೊತೆ ಇರುತ್ತಿದ್ದರು. ವಿದುರ, ಧೃತರಾಷ್ಟ್ರನಿಗೆ ಸರಿ-ತಪ್ಪುಗಳ ಕುರಿತು ಮಾರ್ಗದರ್ಶನ ನೀಡುತ್ತಿದ್ದರು. ಅವುಗಳ ಆಧಾರದ ಮೇಲೆ ಧೃತರಾಷ್ಟ್ರ ಜನರ ಕುರಿತು ತನ್ನ ವಿಚಾರಗಳನ್ನು ವ್ಯಕ್ತಪಡಿಸುತ್ತಿದ್ದರು. ಮಹಾರಾಜ ಧೃತರಾಷ್ಟ್ರನಿಗೆ ವಿದುರ ಜೀವನವನ್ನು ದುಃಖದಲ್ಲಿ ಕಳೆಯುವ ಆರು ವಿಭಿನ್ನ ಪ್ರಕಾರದ ವ್ಯಕ್ತಿಗಳ ಕುರಿತು ಹೇಳಿದ್ದರು. ಆ ವ್ಯಕ್ತಿಗಳು ಯಾರು ತಿಳಿದುಕೊಳ್ಳೋಣ ಬನ್ನಿ.
ವಿದುರ ಹೇಳಿದ ಆರು ವ್ಯಕ್ತಿಗಳು ಯಾರು?
1. ಅಸೂಯೆ ಪಡುವವರು: ಮಹಾತ್ಮ ವಿದುರರ ಪ್ರಕಾರ, ಯಾವಾಗಲೂ ಇತರರ ಬಗ್ಗೆ ಅಸೂಯೆಪಡುವ ವ್ಯಕ್ತಿ. ಇತರರ ಸಂತೋಷವನ್ನು ಕಂಡು ದುಃಖಿತನಾಗುತ್ತಾನೆ. ಅವನು ತನ್ನನ್ನು ಅವರಿಗಿಂತ ಕೀಳು ಎಂದು ಪರಿಗಣಿಸುತ್ತಾನೆ. ಸಂತೋಷದಿಂದ ಇರುವ ವ್ಯಕ್ತಿಗಳಿಗೆ ಸರಿಸಮಾನನಾಗಿ ತೋರಿಸಿಕೊಳ್ಳುವಂತೆ ನಟಿಸುತ್ತಾನೆ. ಆ ವ್ಯಕ್ತಿ ಯಾವಾಗಲೂ ದುಃಖಿತನಾಗಿರುತ್ತಾನೆ.
2. ಇತರರನ್ನು ದ್ವೇಷಿಸುವವನು: ಇತರರನ್ನು ದ್ವೇಷಿಸುವ ವ್ಯಕ್ತಿ. ಅವರ ಎಲ್ಲಾ ಕಾರ್ಯಗಳನ್ನು ಹೇಯವೆಂದು ಪರಿಗಣಿಸುತ್ತಾನೆ. ಅವರೊಂದಿಗೆ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ. ಯಾವಾಗಲೂ ಇತರರನ್ನು ತನಗಿಂತ ಕೀಳು ಎಂದು ಪರಿಗಣಿಸುವವನು ಜೀವನದಲ್ಲಿ ಯಾವಾಗಲೂ ದುಃಖಿತನಾಗಿರುತ್ತಾನೆ.
3. ಅತೃಪ್ತ ವ್ಯಕ್ತಿ: ವಿದುರರು ಹೇಳುವ ಪ್ರಕಾರ , ತನ್ನ ಬಗ್ಗೆ ತಾನೇ ಅತೃಪ್ತ ಮನೋಭಾವನೆಯನ್ನು ಹೊಂದಿರುವ ವ್ಯಕ್ತಿ ಯಾವಾಗಲೂ ಇತರರನ್ನು ನೋಡಿ ದುಃಖಿಸುತ್ತಾನೆ. ಅವನು ಇತರರ ವಸ್ತುಗಳನ್ನು ಇಷ್ಟಪಡುತ್ತಾನೆ, ಅದಕ್ಕಾಗಿಯೇ ಅವನು ಅವುಗಳನ್ನು ಪಡೆಯಲು ಹಂಬಲಿಸುತ್ತಾನೆ. ಇದರಿಂದಾಗಿ ಅವನು ಯಾವಾಗಲೂ ದುಃಖಿತನಾಗಿರುತ್ತಾನೆ.
4. ಕ್ರೋಧ ಮಾಡುವ ವ್ಯಕ್ತಿ: ಮಹಾತ್ಮ ವಿದುರರ ಪ್ರಕಾರ, ಯಾವಾಗಲೂ ನಕಾರಾತ್ಮಕ ಭಾವನೆಗಳನ್ನು ಹೊಂದಿರುವ ವ್ಯಕ್ತಿ. ಯಾವ ಕೆಲಸದಲ್ಲಿಯೂ ಕೂಡ ತೃಪ್ತನಾಗುವುದಲ್ಲ. ಚಿಕ್ಕ ಚಿಕ್ಕ ವಿಷಯಗಳಿಗೂ ಕೋಪಗೊಳ್ಳುತ್ತಾನೆ. ಇಂತಹ ವ್ಯಕ್ತಿಯು ಯಾವಾಗಲೂ ದುಃಖಿತನಾಗಿರುತ್ತಾನೆ.
5. ಅನುಮಾನಿಸುವ ವ್ಯಕ್ತಿ: ಯಾವಾಗಲೂ ಇತರರನ್ನು ಅನುಮಾನಿಸುವ ವ್ಯಕ್ತಿ ತನ್ನ ಜೀವನವನ್ನು ದುಃಖದಲ್ಲಿ ಕಳೆಯುತ್ತಾನೆ ಎಂದು ವಿದುರರು ಹೇಳುತ್ತಾರೆ. ಅವರ ಕೆಲಸಗಳನ್ನು ಅವನು ಇಷ್ಟಪಡುವುದಿಲ್ಲ. ಅವನು ಎಲ್ಲರನ್ನು ಯಾವಾಗಲೂ ಅನುಮಾನಿಸುತ್ತಾನೆ. ಇಂತಹ ವ್ಯಕ್ತಿ ಯಾವಾಗಲೂ ದುಃಖಿತನಾಗಿರುತ್ತಾನೆ.
ಇದನ್ನೂ ಓದಿ-Mangal Gochar 2022 in Aries: 45 ದಿನ ಎಚ್ಚರಿಕೆಯಿಂದ ಇರಬೇಕು ಈ ರಾಶಿಯವರು. ! ಅಂಗಾರಕ ಯೋಗ ಹೆಚ್ಚಿಸಲಿದೆ ಸಮಸ್ಯೆ
5. ಅವಲಂಬಿತ ವ್ಯಕ್ತಿ: ವಿದುರ ನೀತಿಯ ಪ್ರಕಾರ, ಇತರರಿಗೆ ಅಧೀನವಾಗಿರುವ ಅಥವಾ ಸದಾ ಇತರರ ಮೇಲೆ ಅವಲಂಭಿತನಾಗಿರುವ ವ್ಯಕ್ತಿಗೆ ತನ್ನದೇ ಆದ ಅಸ್ತಿತ್ವವಿರುವುದಿಲ್ಲ. ತನ್ನ ಇಚ್ಛೆಗೆ ತಕ್ಕಂತೆ ಆತ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವನು ಯಾವಾಗಲೂ ದುಃಖಿತನಾಗಿರುತ್ತಾನೆ.
ಇದನ್ನೂ ಓದಿ-ಮುಂದಿನ ಒಂದು ವರ್ಷಗಳವರೆಗೆ ಈ ಮೂರು ರಾಶಿಯವರ ಮೇಲೆ ಕೃಪೆ ತೋರಲಿದ್ದಾನೆ ರಾಹು ..!
(ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.