Vijaya Ekadashi 2023: ವಿಜಯ ಏಕಾದಶಿ ಯಾವಾಗ? ಶತ್ರುವನ್ನು ಮಣಿಸಲು ಮುಹೂರ್ತದಲ್ಲಿ ಈ ಕೆಲಸ ಮಾಡಿ

Vijaya Ekadashi 2023: ವಿಜಯ ಏಕಾದಶಿ ಉಪವಾಸವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಉಪವಾಸವು ಶತ್ರುಗಳ ಮೇಲೆ ವಿಜಯವನ್ನು ನೀಡುತ್ತದೆ.

Written by - Puttaraj K Alur | Last Updated : Feb 12, 2023, 10:53 AM IST
  • ವಿಜಯ ಏಕಾದಶಿ ಉಪವಾಸವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ
  • ಈ ವರ್ಷ ವಿಜಯ ಏಕಾದಶಿ ಫೆ.16ರ ಬೆಳಗ್ಗೆ 5.32ಕ್ಕೆ ಪ್ರಾರಂಭವಾಗಿ, ಫೆ.17ರ ಮಧ್ಯಾಹ್ನ 2.49ಕ್ಕೆ ಕೊನೆಗೊಳ್ಳುತ್ತದೆ
  • ವಿಜಯ ಏಕಾದಶಿ ವ್ರತ ಆಚರಿಸುವುದರಿಂದ ಶತ್ರುಗಳ ಮೇಲೆ ಜಯ ಲಭಿಸುತ್ತದೆ ಎಂದು ನಂಬಲಾಗಿದೆ
Vijaya Ekadashi 2023: ವಿಜಯ ಏಕಾದಶಿ ಯಾವಾಗ? ಶತ್ರುವನ್ನು ಮಣಿಸಲು ಮುಹೂರ್ತದಲ್ಲಿ ಈ ಕೆಲಸ ಮಾಡಿ title=
ವಿಜಯ ಏಕಾದಶಿ ಉಪವಾಸ

ವಿಜಯ ಏಕಾದಶಿ 2023 ದಿನಾಂಕ ಮತ್ತು ಸಮಯ: ವಿಜಯ ಏಕಾದಶಿ ಉಪವಾಸವನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಉಪವಾಸವು ಶತ್ರುಗಳ ಮೇಲೆ ವಿಜಯವನ್ನು ನೀಡುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷದ ವಿಜಯ ಏಕಾದಶಿ ಫೆಬ್ರವರಿ 16ರಂದು ಬೆಳಗ್ಗೆ 5.32ಕ್ಕೆ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 17ರಂದು ಮಧ್ಯಾಹ್ನ 2.49ಕ್ಕೆ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಈ ಉಪವಾಸವನ್ನು ಎರಡೂ ದಿನಗಳಲ್ಲಿ ಆಚರಿಸಬಹುದು. ಹೀಗಾಗಿ ವಿಜಯ ಏಕಾದಶಿ ವ್ರತವನ್ನು ಯಾವ ದಿನ ಆಚರಿಸಿದರೆ ಒಳ್ಳೆಯದು ಎಂಬ ಗೊಂದಲ ಜನರಲ್ಲಿ ಮೂಡಿದೆ.

ವಿಜಯ ಏಕಾದಶಿ ಉಪವಾಸದ ನಿಖರ ದಿನಾಂಕ

ಪಂಚಾಂಗದ ಪ್ರಕಾರ ವಿಜಯ ಏಕಾದಶಿ ತಿಥಿಯು ಫೆಬ್ರವರಿ 16ರಂದು ದಿನವಿಡೀ ಇರುತ್ತದೆ ಮತ್ತು ಫೆಬ್ರವರಿ 17ರ ಮುಂಜಾನೆಯವರೆಗೆ ಮುಂದುವರಿಯುತ್ತದೆ. ಹೀಗಾಗಿ ಫೆಬ್ರವರಿ 16ರಂದು ಈ ಉಪವಾಸವನ್ನು ಆಚರಿಸುವುದು ಉತ್ತಮ. ಮತ್ತೊಂದೆಡೆ ವೈಷ್ಣವ ಪಂಥದ ಜನರು ಮತ್ತು ಸಂತರು ಫೆಬ್ರವರಿ 17ರಂದು ವಿಜಯ ಏಕಾದಶಿ ಉಪವಾಸ ಆಚರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಫೆಬ್ರವರಿ 16ರಂದು ವಿಜಯ ಏಕಾದಶಿ ಉಪವಾಸ ಆಚರಿಸುವವರಿಗೆ ಫೆಬ್ರವರಿ 17ರ ಬೆಳಗ್ಗೆ 8:01ರಿಂದ 9:18ರವರೆಗೆ ಉಪವಾಸ ಮುಕ್ತಾಯಗೊಳಿಸುವ ಸಮಯ ಇರುತ್ತದೆ. ಮತ್ತೊಂದೆಡೆ ಫೆಬ್ರವರಿ 17ರಂದು ಉಪವಾಸ ಮಾಡುವ ಜನರಿಗೆ ಫೆಬ್ರವರಿ 18ರ ಬೆಳಗ್ಗೆ 7.01ರಿಂದ 9.18ರವರೆಗೆ ಉಪವಾಸ ಮುಕ್ತಾಯಗೊಳಿಸಲು ಶುಭವಾಗಿರುತ್ತದೆ.

ಇದನ್ನೂ ಓದಿ: Maha Shivratri 2023: ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

ಶತ್ರುಗಳ ಮೇಲೆ ವಿಜಯ ಸಾಧಿಸಲಾಗುತ್ತದೆ

ವಿಜಯ ಏಕಾದಶಿ ವ್ರತವನ್ನು ಆಚರಿಸುವುದರಿಂದ ಶತ್ರುಗಳ ಮೇಲೆ ಜಯ ಲಭಿಸುತ್ತದೆ ಎಂದು ನಂಬಲಾಗಿದೆ. ಭಗವಾನ್ ಶ್ರೀರಾಮ ಕೂಡ ಲಂಕೆಗೆ ತೆರಳುವ ಮೊದಲು ವಿಜಯ ಏಕಾದಶಿ ಉಪವಾಸವನ್ನು ಆಚರಿಸಿದ್ದರು. ಶತ್ರುಗಳನ್ನು ಗೆಲ್ಲಲು ಬಯಸುವವರು ವಿಜಯ ಏಕಾದಶಿಯನ್ನು ನಿಯಮಗಳ ಪ್ರಕಾರ ವ್ರತವನ್ನು ಆಚರಿಸಬೇಕು. ವಿಷ್ಣುವನ್ನು ಪೂಜಿಸಬೇಕು ಮತ್ತು ವಿಜಯ ಏಕಾದಶಿ ವ್ರತದ ಕಥೆಯನ್ನು ಓದಬೇಕು.

ಈ ವರ್ಷ ಫೆಬ್ರವರಿ16ರಂದು ಗುರುವಾರದಂದು ವಿಜಯ ಏಕಾದಶಿ ಬರುವ ಕಾಕತಾಳೀಯವೂ ಇದೆ. ಗುರುವಾರ ಮತ್ತು ಏಕಾದಶಿ ಎರಡೂ ಶ್ರೀ ಹರಿಗೆ ಸಮರ್ಪಿತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಉಪವಾಸದ ಮಹತ್ವ ಮತ್ತಷ್ಟು ಹೆಚ್ಚುತ್ತದೆ. ಈ ದಿನ ವಿಷ್ಣುವಿನ ಪೂಜೆಯಲ್ಲಿ ಬಾಳೆಹಣ್ಣು, ಹಳದಿ ಬಟ್ಟೆ, ಹಳದಿ ಸಿಹಿತಿಂಡಿಗಳನ್ನು ಅರ್ಪಿಸಿ. ಇದರಿಂದ ನಿಮ್ಮ ಅದೃಷ್ಟವೂ ಎಚ್ಚರಗೊಳ್ಳುತ್ತದೆ.

ಇದನ್ನೂ ಓದಿ: Garud Puran Lessons: ಇಂತಹ ಸಂಗಾತಿ ಇದ್ದರೆ ಜೀವನವೇ ನರಕಾಗುತ್ತದೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News