1. High Blood Pressure: ಆಕಸ್ಮಿಕವಾಗಿ ಹೆಚ್ಚಾದ ರಕ್ತದೊತ್ತಡವನ್ನು ಈ ರೀತಿ ನಿಯಂತ್ರಿಸಿ ಹೃದಯಾಪಾಯದಿಂದ ಪಾರಾಗಿ
2. ಆಕಸ್ಮಿಕವಾಗಿ ಬಿಪಿ ಹೆಚ್ಚಾದಾಗ ಹೃದಯಾಘಾತದಂತಹ ಮಾರಣಾಂತಿಕ ಸ್ಥಿತಿಯಿಂದ ಪಾರಾಗಲು ಏನು ಮಾಡಬೇಕು ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ.
3. ಇಂತಹ ಸಂದರ್ಭಗಳಲ್ಲಿ ಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
4. ಅಧಿಕ ರಕ್ತದೊತ್ತಡದ ಸಂದರ್ಭದಲ್ಲಿ ಮಾಡಬೇಕಾದ ಮೊದಲ ಕೆಲಸವೆಂದರೆ ತಕ್ಷಣವೇ ಜನಸಂದಣಿಯಿಂದ ದೂರಾಗಿ. ಏಕೆಂದರೆ ಬಿಪಿ ಹೆಚ್ಚಾದಾಗ ಜನಜಂಗುಳಿಯಿಂದ ಗಾಬರಿ ಹೆಚ್ಚಾಗಬಹುದು.
5. ಇದಾದ ಬಳಿಕ ತಾಜಾ ಗಾಳಿ ಬರುವ ಜಾಗದಲ್ಲಿ ಕುಳಿತುಕೊಳ್ಳಿ ಅಥವಾ ಮಲಗಿಕೊಳ್ಳಿ. ಎಸಿ ಅಥವಾ ಫ್ಯಾನ್ ಆನ್ ಮಾಡಿ ಮತ್ತು ದೀರ್ಘಶ್ವಾಸವನ್ನು ತೆಗೆದುಕೊಳ್ಳಿ.
6. ಆಳವಾದ ಉಸಿರನ್ನು ತೆಗೆದುಕೊಳ್ಳುವಾಗ, ಮೂಗಿನ ಮೂಲಕ ಉಸಿರನ್ನು ಒಳತೆಗೆದುಕೊಂಡು ಮತ್ತು ಬಾಯಿಯ ಮೂಲಕ ಉಸಿರನ್ನು ಹೊರಬಿಡಬೇಕು ಎಂಬುದನ್ನು ನೆನಪಿನಲ್ಲಿಡಿ. ಇದು ಒತ್ತಡವನ್ನು ನಿವಾರಿಸಲು ಮತ್ತು ಉಸಿರಾಟವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ.
7. ಉಸಿರಾಟದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಾಗ, ಒಂದು ಲೋಟ ಎಳನೀರು ಕುಡಿಯಿರಿ.
8. ನೀವು ಈಗಾಗಲೇ ಅಧಿಕ ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಆ ಔಷಧಿಯನ್ನು ಸೇವಿಸಿ. ನೀವು ಕನಿಷ್ಟ ಅರ್ಧ ಘಂಟೆಯವರೆಗೆ ಶಾಂತವಾಗಿ ಮಲಗಿಕೊಳ್ಳಿ.
9. ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ವೈದ್ಯರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.