ಮುಖಕ್ಕೆ ಕ್ಯಾಸ್ಟರ್ ಆಯಿಲ್ ಹಚ್ಚಿ ಮಸಾಜ್ ಮಾಡಿದರೆ ಒಣ ತ್ವಚೆಯ ಸಮಸ್ಯೆ ದೂರವಾಗುತ್ತದೆ.
ಮೊಸರಿನೊಂದಿಗೆ ಆಲುಗಡ್ಡೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಒಣ ತ್ವಚೆಯ ಸಮಸ್ಯೆ ದೂರವಾಗುವುದು ಮಾತ್ರವಲ್ಲ ಕಲೆಗಳು ನಿವಾರಣೆಯಾಗುವುದು.
ಬಾಳೆಹಣ್ಣನ್ನು ಕಿವುಚಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.
ಬೆಣ್ಣೆಯನ್ನು ಹಾಗೆಯೇ ಮುಖದ ಮೇಲೆ ಹಚ್ಚಿ ಮಸಾಜ್ ಮಾಡಬೇಕು, ಸ್ವಳಪ್ ಸಮಯದ ಬಳಿಕ ಮುಖವನ್ನು ನೀರಿನಿಂದ ತೊಳೆಯಿರಿ.
ಅರಿಶಿನವನ್ನು ಹಚ್ಚಿ ಮುಖಕ್ಕೆ ಹಚ್ಚಿದರೂ ತ್ವಚೆಯ ಸಮಸ್ಯೆ ನಿವಾರಣೆಯಾಗುವುದು.
ಸೌತೆಕಾಯಿಯನ್ನು ಕಟ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖ ಮಿರ ಮಿರನೆ ಹೊಳೆಯುತ್ತದೆ.
ಟೊಮೇಟೊ ರಸವನ್ನು ತೆಗೆದು ಮುಖಕ್ಕೆ ಹಚ್ಚಿದರೂ ಅನೇಕ ಪ್ರಯೋಜನಗಳು ಸಿಗುವುದು.
ಮಜ್ಜಿಗೆಯನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ತೊಳೆದರೆ ತ್ವಚೆ ಹೊಳೆಯುತ್ತದೆ.
ಸೇಬಿನ ಸಿಪ್ಪೆ ತೆಗೆದು ಹಾಲಿಗೆ ಹಾಕಿ ಚೆನ್ನಾಗಿ ಕುದಿಸಿ. ಇದು ಮೊಸರಿನ ರೀತಿ ದಪ್ಪವಾಗುತ್ತದೆ. ನಂತರ ಇದನ್ನು ಮುಖಕ್ಕೆ ಹಚ್ಚಿ.