ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರ ಹಾಗೂ ಜೀವನ ಶಾಸ್ತ್ರದಲ್ಲಿ ಹಲವಾರು ಮಹತ್ವವಾದ ಸಂಗತಿಗಳನ್ನು ಉಲ್ಲೇಕಿಸಿದ್ದಾರೆ.
ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ನಾವು ಅತೀ ಶೀಘ್ರದಲ್ಲಿ ಶ್ರೀಮಂತರಾಗಲು 6 ಮಾರ್ಗಗಳನ್ನು ಸೂಚಿಸಿದ್ದಾರೆ.
ನಿಮ್ಮ ಜೀವನದ ಗುರಿಗಳನ್ನು ಯಾರೆಂದಿಗೂ ಹಂಚಿಕೊಳ್ಳದೆ ನಿಮ್ಮ ಕೆಲಸವನ್ನು ಏಕಾಗ್ರತೆಯಿಂದ ಮಾಡಿ.
ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಬ್ಯಾಹ್ಮೀ ಮುಹೂರ್ತದಲ್ಲಿ ಬೆಳಗ್ಗಿನ ಜಾವ ಬೇಗ ಏಳಬೇಕು.
ಮಾಡುವ ಕೆಲಸ ಯಾವುದೇ ಇರಲಿ ಅದನ್ನು ಮಾಡಲು ನಾಚಿಕೆ ಪಡಬಾರದು, ಕಷ್ಟ ಪಟ್ಟು ದುಡಿಯುವವನು ಮಾತ್ರ ಶ್ರೀಮಂತನಾಗುತ್ತಾನೆ ಎನ್ನುತ್ತದೆ ಚಾಣಕ್ಯರ ಶಾಸ್ತ್ರ.
ಸೋಮಾರಿತನ ಮಾಡುವುದರಿಂದ ಎಂದಿಗೂ ಶ್ರೀಮಂತರಾಗಲು ಸಾಧ್ಯವಾಗುವುದಿಲ್ಲ.
ಉಳಿತಾಯ ಮಾಡುವ ಅಭ್ಯಾಸ ಇರುವವರು ಬೇಗನೆ ಶ್ರೀಮಂತರಾಗುತ್ತಾರೆ ಎನ್ನುತ್ತದೆ ಚಾಣಕ್ಯರ ನೀತಿ ಶಾಸ್ತ್ರ.