Hair Care: ದಷ್ಟಪುಷ್ಟ.. ಮೊನಕಾಲುದ್ದ ಕೂದಲಿಗೆ ಅಲೋವೆರಾ! ಆದ್ರೆ ಹೀಗೆ ಬಳಸಿ..

Savita M B
Jan 04,2025


ಅಲೋವೆರಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತ್ವಚೆಯ ಸೌಂದರ್ಯಕ್ಕಾಗಿ ಅಲೋವೆರಾವನ್ನು ಅನೇಕರು ಬಳಸುತ್ತಾರೆ.


ಅಲೋವೆರಾ ಚರ್ಮಕ್ಕೆ ಮಾತ್ರವಲ್ಲದೆ ಕೂದಲಿಗೆ ಸಹ ಒಳ್ಳೆಯದು. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.


ಅಲೋವೆರಾ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.


ಕೂದಲನ್ನು ಆರೋಗ್ಯವಾಗಿಡುವಲ್ಲಿ ಅಲೋವೆರಾಕ್ಕಿಂತ ಮಿಗಿಲಾದ ಪರಿಹಾರವಿಲ್ಲ ಎಂದರೆ ಅತಿಶಯೋಕ್ತಿಯಲ್ಲ.


ಇಂದಿನ ಕಾಲದಲ್ಲಿ ಕೂದಲು ಉದುರುವ ಸಮಸ್ಯೆ ಅನೇಕರಲ್ಲಿದೆ. ಪೋಷಕಾಂಶಗಳಿಲ್ಲದೆ ಕೂದಲು ತೆಳ್ಳಗಾಗುತ್ತದೆ.


ಆದರೆ ಕೂದಲಿನ ಬೆಳವಣಿಗೆಗೆ ಅಲೋವೆರಾವನ್ನು ಹೇಗೆ ಬಳಸಬೇಕೆಂದು ಇಲ್ಲಿ ತಿಳಿಯೋಣ.


ನಾಲ್ಕು ಅಲೋವೆರಾ ತಿರುಳಿಗೆ ಒಂದು ಚಮಚ ಆಲಿವ್‌-ತೆಂಗಿನ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿ.


ನಂತರ, ಒಂದು ಗಂಟೆ ಬಿಟ್ಟು ಸೌಮ್ಯವಾದ ಶಾಂಪೂವಿನಿಂದ ನಿಮ್ಮ ತಲೆಯನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.


ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಕೂದಲು ದಟ್ಟವಾಗಿ ಉದ್ದವಾಗಿ ಬೆಳೆಯುತ್ತದೆ.

VIEW ALL

Read Next Story