ಒಂದು ದಾಳಿಂಬೆ ನೂರು ಕಾಯಿಲೆಗೆ ಪರಿಹಾರವಾಗಿ ಕೆಲಸ ಮಾಡುತ್ತದೆಯಂತೆ.
ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ, ಸೆಲೆನಿಯಮ್ ಮತ್ತು ಸತುವು ದಾಳಿಂಬೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ದಾಳಿಂಬೆ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ಹಲವಾರು ರೋಗಗಳಿಂದ ಪಾರಾಗಬಹುದು.
ದಾಳಿಂಬೆ ರಸ ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿಯಾಗಿದೆ. ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳನ್ನು ತಡೆಗಟ್ಟಲು ದಾಳಿಂಬೆ ರಸವನ್ನು ಸೇವಿಸಬೇಕು.
ದಾಳಿಂಬೆ ವ್ಯಕ್ತಿಯ ಸ್ಮರಣ ಶಕ್ತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ.
ದಾಳಿಂಬೆ ರಸ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ದಾಳಿಂಬೆ ರಸ ಕೀಲು ನೋವು, ಮಂಡಿ ನೋವು ಮುಂತಾದ ಕಾಯಿಲೆಗಳಿಂದ ಪರಿಹಾರ ನೀಡುತ್ತದೆ. ಸಂಧಿವಾತದ ಸಂದರ್ಭದಲ್ಲಿಯೂ ಸಹಾಯ ಮಾಡುತ್ತದೆ.
ದಾಳಿಂಬೆ ಪೊಟ್ಯಾಷಿಯಂ ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಆರೋಗ್ಯಕರ ಹೃದಯಕ್ಕೆ ಬಹಳ ಮುಖ್ಯ. ಪ್ರತಿ ದಿನ ಒಂದು ದಾಳಿಂಬೆ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
ಟೈಪ್ 2 ಡಯಾಬಿಟೀಸ್ ರೋಗಿಗಳು ದಾಳಿಂಬೆ ಮತ್ತು ದಾಳಿಂಬೆ ರಸವನ್ನು ಸೇವಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಅಧಿಕ ರಕ್ತದೊತ್ತಡ ಸಮಸ್ಯೆಯಲ್ಲಿಯೂ ದಾಳಿಂಬೆ ಪ್ರಯೋಜನಕಾರಿ. ಇದು ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ.