ಹಲ್ಲುಗಳನ್ನು ಫಳ-ಫಳ ಹೊಳೆಯುವಂತೆ ಮಾಡಲು ಸುಲಭ ಪರಿಹಾರ

Yashaswini V
Mar 01,2024

ಹಲ್ಲುಗಳು

ಸ್ವಚ್ಛ ಮತ್ತು ಹೊಳೆಯುವ ಹಲ್ಲುಗಳು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.

ಮನೆಮದ್ದು

ಹಲ್ಲುಗಳನ್ನು ಸುಂದರಗೊಳಿಸಿ, ಫಳ-ಫಳ ಹೊಳೆಯುವಂತೆ ಮಾಡಲು ಕೆಲವು ಮನೆಮದ್ದುಗಾಲು ತುಂಬಾ ಪ್ರಯೋಜನಕಾರಿ ಆಗಿವೆ. ಅವುಗಳೆಂದರೆ...

ನಿಂಬೆ ಹಣ್ಣು

ಅರ್ಧ ನಿಂಬೆಹಣ್ಣಿನ ಹೋಳನ್ನು ತೆಗೆದುಕೊಂಡು ಅದರಿಂದ ಹಲ್ಲು ಮತ್ತು ವಸಡುಗಳ ಮೇಲೆ ಉಜ್ಜಿಕೊಳ್ಳಿ ಇದು ಹಲ್ಲುಗಳನ್ನು ಸುಂದರಗೊಳಿಸುತ್ತದೆ.

ಉಪ್ಪು

ಅರ್ಧ ಚಮಚ ಉಪ್ಪಿನಲ್ಲಿ ಮೂರ್ನಾಲ್ಕು ಹನಿ ಸಾಸಿವೆ ಎಣ್ಣೆಯನ್ನು ಬೆರೆಸಿ ಇದರಲ್ಲಿ ಹಲ್ಲುಗಳನ್ನು ಉಜ್ಜಿ. ಇದು ಹಳದಿ ಹಲ್ಲುಗಳನ್ನು ಬಿಳಿ ಬಣ್ಣಕ್ಕೆ ತಿರುಗಿಸುತ್ತದೆ.

ಸ್ಟ್ರಾಬೆರಿ

ಸ್ಟ್ರಾಬೆರಿ ಹಣ್ಣನ್ನು ಮಧ್ಯಕ್ಕೆ ಕತ್ತರಿಸಿ ಇದನ್ನು ಹಲ್ಲುಗಳ ಮೇಲೆ ಉಜ್ಜಿ. ಸ್ಟ್ರಾಬೆರಿಯಲ್ಲಿರುವ ಅಂಶಗಳು ಹಲ್ಲುಗಳನ್ನು ಬ್ಲೀಚ್ ಮಾಡುತ್ತದೆ.

ಬ್ಲ್ಯಾಕ್‌ಬೆರಿ

ಬ್ಲ್ಯಾಕ್‌ಬೆರಿ ಎಲೆಗಳ ಪೇಸ್ಟ್ ತಯಾರಿಸಿ, ಇದರೊಂದಿಗೆ ಸ್ವಲ್ಪ ಕಲ್ಲುಪ್ಪನ್ನು ಬೆರೆಸಿ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲುಗಳು ಫಳ-ಫಳ ಹೊಳೆಯುತ್ತವೆ.

ಬೇವಿನ ಟೂತ್‌ಪೇಸ್ಟ್‌

ನೀವು ಬೇವಿನ ಟೂತ್‌ಪೇಸ್ಟ್‌ ಬಳಸಿ ನಿತ್ಯ ಹಲ್ಲುಜ್ಜುವುದರಿದ್ನ ಹಲ್ಲುಗಳು ಸುಂದರವಾಗಿ, ದೃಢವಾಗಿರುತ್ತವೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story