ನಿಂಬೆ ಹಣ್ಣಿಗೆ ಈ ನಾಲ್ಕು ವಸ್ತುವನ್ನು ಬೆರೆಸಿ ಹಚ್ಚಿದರೆ ಮುಖದ ಕಾಂತಿ ಹೆಚ್ಚುವುದು

Ranjitha R K
Sep 07,2023


ಮಹಿಳೆಯರು ತಮ್ಮ ಮುಖವನ್ನು ಕಾಂತಿಯುತಗೊಳಿಸಲು ಹಲವು ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿ ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಬಹುದು.


ಒಂದು ಚಮಚ ಜೇನು ತುಪ್ಪಕ್ಕೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ.


15 ನಿಮಿಷಗಳವರೆಗೆ ಈ ಮಿಶ್ರಣವನ್ನು ಮುಖದ ಮೇಲೆ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ.


ಆಲೋವಿರಾ ಜೆಲೆ ಅಂಟ್ಟು ನಿಂಬೆ ರಸವನ್ನು ತೆಗೆದುಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮಸಾಜ್ ಮಾಡಿ.


10 ನಿಮಿಷಗಳವರೆಗೆ ಈ ಮಿಶ್ರಣವನ್ನು ಮುಖದ ಮೇಲೆಯೇ ಇರಿಸಿ ನಂತರ ಮುಖವನ್ನು ತೊಳೆಯಿರಿ.


ಪಪ್ಪಾಯದ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಇದಕ್ಕೆ ನಿಂಬೆ ರಸವನ್ನು ಬೆರೆಸಿ.


ಈ ಪೇಸ್ಟ್ ಅನ್ನು ಮುಖದ 10 ರಿಂದ 15 ನಿಮಿಷಗಳವರೆಗೆ ಬಿಟ್ಟು ನಂತರ ಮುಖವನ್ನು ತೊಳೆಯಿರಿ.


ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸ ಬೆರೆಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ಮುಖವನ್ನು ನೀರಿನಿಂದ ತೊಳೆಯಿರಿ.


ಈ ಫೇಸ್ ಮಾಸ್ಕ್ ಗಳನ್ನೂ ಒಮ್ಮೆ ಖಂಡಿತವಾಗಿಯೂ ಟ್ರೈ ಮಾಡಿ.

VIEW ALL

Read Next Story