ಐಸ್ ಕ್ಯೂಬ್’ನ್ನು ಮುಖಕ್ಕೆ ಹಚ್ಚಿ 5 ನಿಮಿಷ ಚೆನ್ನಾಗಿ ಮಸಾಜ್ ಮಾಡಿದರೆ ಮೊಡವೆ ಸಮಸ್ಯೆ ಮಾಯವಾಗುವುದು.
ಉರಿಯೂತ ನಿವಾರಕ ಅಂಶ ಇದರಲ್ಲಿದ್ದು, ಮೊಡವೆಗಳನ್ನು ಕಡಿಮೆ ಮಾಡಲು ಮತ್ತು ಗುಣಪಡಿಸಲು ಸಹಾಯ ಮಾಡುತ್ತದೆ.
ಹೊಳೆಯುವ ಮತ್ತು ಕಾಂತಿಯುತ ಚರ್ಮಕ್ಕಾಗಿ ಪ್ರತೀದಿನ ಐಸ್ ಕ್ಯೂಬ್’ನ್ನು ಮುಖಕ್ಕೆ ಹಚ್ಚಿ.
ಮುಖದ ಮೇಲೆ ಐಸ್ ಕ್ಯೂಬ್ ಅನ್ನು ಮಸಾಜ್ ಮಾಡುವುದರಿಂದ ಮುಖವು ಸ್ವಚ್ಛವಾಗಿ ಕಾಣುತ್ತದೆ
ನಿದ್ರೆಯ ಕೊರತೆ ಮತ್ತು ಕಣ್ಣಿಗೆ ಆಯಾಸವಾದರೆ ಐಸ್ ಕ್ಯೂಬ್’ನ್ನು ಚೆನ್ನಾಗಿ ಮಸಾಜ್ ಮಾಡಿ, ಊದಿಕೊಂಡ ಅನುಭವ ತಕ್ಷಣ ಕಡಿಮೆಯಾಗುತ್ತದೆ.
ಕಣ್ಣುಗಳ ಕೆಳಗೆ ಐಸ್ ಕ್ಯೂಬ್ಗಳನ್ನು ಮಸಾಜ್ ಮಾಡುವುದರಿಂದ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.
ಅತಿಯಾದ ಸೂರ್ಯನ ಬೆಳಕು, ಅಲರ್ಜಿಗಳು, ದದ್ದುಗಳನ್ನು ನಿವಾರಿಸಲು ಸಹ ಐಸ್ ಕ್ಯೂಬ್’ಗಳು ಸಹಾಯ ಮಾಡುತ್ತದೆ.
ಹಾಲಿನ ಐಸ್ ಕ್ಯೂಬ್’ಗಳಿಂದ ಮಸಾಜ್ ಮಾಡಿದರೆ, ಡೆಡ್ ಸ್ಕಿನ್’ಗಳು ತೊಲಗಿ ಕಾಂತಿಯುವ ಮತ್ತು ನೈಸರ್ಗಿಕ ಹೊಳಪು ಸಿಗುತ್ತದೆ.