ಕೂದಲಿಗೆ ಹಚ್ಚುವ ಎಣ್ಣೆಯೂ ಜೀವನದ ಮೇಲೆ ಬೀರುತ್ತೆ ಗಂಭೀರ ಪ್ರಭಾವ... ಯಾವ ದಿನ ತಲೆಗೆ ಎಣ್ಣೆ ಹಾಕಿದ್ರೆ ಅದೃಷ್ಟ ಗೊತ್ತಾ!

Yashaswini V
Jul 14,2025

ತಲೆಗೆ ಎಣ್ಣೆ ಹಚ್ಚಲು ಶುಭದಿನ

ವಾರದ ಏಳೂ ದಿನಗಳಲ್ಲಿ ನಾವು ಯಾವ ದಿನ ಕೂದಲಿಗೆ ಎಣ್ಣೆ ಹಚ್ಚುತ್ತಿವೋ ಎಂಬುದು ನಮ್ಮ ಬದುಕಿನ ಅದೃಷ್ಟ, ದುರಾದೃಷ್ಟದ ಮೇಲೂ ಗಂಭೀರ ಪ್ರಭಾವ ಉಂಟು ಮಾಡುತ್ತದೆ. ಹಾಗಿದ್ದರೆ ಯಾವ ದಿನ ಕೂದಲಿಗೆ ಎಣ್ಣೆ ಹಚ್ಚಿದರೆ ಒಳ್ಳೆಯದು ಗೊತ್ತಾ...

ಭಾನುವಾರ

ಭಾನುವಾರದಂದು ಕೂದಲಿಗೆ ಎಣ್ಣೆ ಹಚ್ಚುವುದರಿಂದ ದೀರ್ಘಾವಧಿಯ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ.

ಸೋಮವಾರ

ಸೋಮವಾರದಂದು ಕೂದಲಿಗೆ ಎಣ್ಣೆ ಹಚ್ಚುವುದರಿಂದ ಸೌಂದರ್ಯ ವೃದ್ಧಿಯಾಗುತ್ತದೆ.

ಮಂಗಳವಾರ

ಮಂಗಳವಾರದಂದು ಕೂದಲಿಗೆ ಎಣ್ಣೆ ಹಾಕುವುದರಿಂದ ಮಂಗಳ ದೋಷ ಉಂಟಾಗುತ್ತದೆ. ಯಾವುದೇ ಕೆಲಸವೂ ಕೈ ಹಿಡಿಯುವುದಿಲ್ಲ.

ಬುಧವಾರ

ಬುಧವಾರದಂದು ತಲೆಗೆ ಎಣ್ಣೆ ಹಚ್ಚುವುದರಿಂದ ಸೌಭಾಗ್ಯ ವೃದ್ಧಿಯಾಗುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಸುಲಭ ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಜನ ನಿಮ್ಮತ್ತ ಆಕರ್ಷಿತರಾಗುತ್ತಾರೆ.

ಗುರುವಾರ

ಗುರುವಾರದಂದು ತಲೆಗೆ ಎಣ್ಣೆ ಹಚ್ಚುವುದರಿಂದ ದುರಾದೃಷ್ಟ ಹೆಗಲೇರುತ್ತದೆ. ಮಾಡುವ ಕೆಲಸಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ನಿಮ್ಮ ಯೋಜನೆಯಂತೆ ಯಾವುದೂ ನಡೆಯುವುದಿಲ್ಲ.

ಶುಕ್ರವಾರ

ಶುಕ್ರವಾರದಂದು ತಲೆಗೆ ಎಣ್ಣೆ ಹಚ್ಚುವುದರಿಂದ ಧನಹಾನಿ ಉಂಟಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಹಣ ಹೂಡಿದರೂ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ಆದಾಯದ ಮೂಲವೂ ಕೊನೆಗೊಳ್ಳುತ್ತದೆ.

ಶನಿವಾರ

ಶನಿವಾರದ ದಿನ ಕೂದಲಿಗೆ ಎಣ್ಣೆ ಹಚ್ಚುವುದನ್ನು ಭಾರೀ ಅದೃಷ್ಟ ಎನ್ನಲಾಗುತ್ತದೆ. ಅದ್ಭುತ ಯೋಗದಿಂದ ನಿಮ್ಮ ಖಜಾನೆ ಭರ್ತಿಯಾಗಲಿದ್ದು, ಅಪಾರ ಧನ-ಸಂಪತ್ತು ವೃದ್ದಿಯಾಗುತ್ತದೆ. ನಿಮ್ಮ ಸ್ಥಾನಮಾನ, ಗೌರವ, ಕೀರ್ತಿ ಎಲ್ಲವೂ ಹೆಚ್ಚಾಗುತ್ತದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story