ಮುಖಕ್ಕೆ 'ಮೊಸರು' ಲೇಪಿಸಿದರೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

Published by: Yashaswini V | Jul 16, 2025

ಮೊಸರು

ಮೊಸರು ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲ, ಮ್ಸರು ಬಳಸುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆಯಾಗಿ ಚರ್ಮದ ಕಾಂತಿಯೂ ಹೆಚ್ಚಾಗುತ್ತದೆ.

Published by: Yashaswini V | Jul 16, 2025

ಚರ್ಮದ ಆರೈಕೆಯಲ್ಲಿ ಮೊಸರು

ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ 12, ಪ್ರೋಟೀನ್, ಪ್ರೋಬಯಾಟಿಕ್‌ಗಳಂತಹ ಅನೇಕ ಅಗತ್ಯ ಪೋಷಕಾಂಶಗಳಿದ್ದು ಇದು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಹಾಗಾಗಿ, ಚರ್ಮದ ಆರೈಕೆಯಲ್ಲಿ ಮೊಸರಿನ ಬಳಕೆ ತುಂಬಾ ಲಾಭದಾಯಕವಾಗಿದೆ.

Published by: Yashaswini V | Jul 16, 2025

ಚರ್ಮದ ಶುದ್ಧೀಕರಣ

ಮೊಸರಿನಲ್ಲಿ ಲ್ಯಾಕ್ಟಿಕ್ ಎಂಬ ಆಮ್ಲ ಕಂಡು ಬರುತ್ತದೆ. ಇದು ಚರ್ಮವನ್ನು ಆಳವಾಗಿ ಶುದ್ಧೀಕರಿಸುವ ಮೂಲಕ ಡೆಡ್ ಸ್ಕಿನ್ ಕೋಶಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ ಆಗಿದೆ.

Published by: Yashaswini V | Jul 16, 2025

ಮುಖಕ್ಕೆ ಕಾಂತಿ

ನಿಯಮಿತವಾಗಿ ಮೊಸರಿನ ಬಳಕೆಯಿಂದ ಚರ್ಮದ ಮುಖದ ಕಾಂತಿ ಹೆಚ್ಚಾಗುತ್ತದೆ.

Published by: Yashaswini V | Jul 16, 2025

ಕಲೆ ನಿವಾರಣೆ

ಮೊಸರಿನಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕಗಳು ಚರ್ಮದ ಮೇಲಿನ ಕಳೆಗಳನ್ನು ನಿವಾರಿಸಲು ಸಹಕಾರಿ ಆಗಿದೆ.

Published by: Yashaswini V | Jul 16, 2025

ಸುಕ್ಕುಗಳ ನಿವಾರಣೆ

ಮೊಸರಿನ ಬಳಕೆಯು ಕಾಲಜನ್ ಅನ್ನು ಉತ್ತೇಜಿಸಿ, ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳುತ್ತದೆ. ಇದರಿಂದ ಚರ್ಮದ ಮೇಲೆ ಮೂಡಿರುವ ಸುಕ್ಕುಗಳ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

Published by: Yashaswini V | Jul 16, 2025

ಮೊಡವೆಯಿಂದ ಮುಕ್ತಿ

ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಚರ್ಮದ ಮೇಲೆ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಿ ಮೊಡವೆಗಳ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಕಾರಿ ಆಗಿದೆ.

Published by: Yashaswini V | Jul 16, 2025

ಸ್ಕಿನ್ ಟ್ಯಾನ್

ಮೊಸರಿನಲ್ಲಿರುವ ಗುಣಗಳು ಸ್ಕಿನ್ ಟ್ಯಾನ್ ತೆಗೆದುಹಾಕಲು ಮತ್ತು ಬಿಸಿಲಿನಿಂದ ಉಂಟಾಗುವ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಪ್ರಯೋಜನಕಾರಿ ಆಗಿದೆ.

Published by: Yashaswini V | Jul 16, 2025

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Jul 16, 2025

VIEW ALL

Read Next Story