ಬಾಳೆಹಣ್ಣು ಹಲವಾರು ಆರೋಗ್ಯ ಪ್ರಯೋಜನ ಹೊಂದಿದೆ.
ಜೇನುತುಪ್ಪ, ಓಟ್ ಮೀಲ್, ಬಾಳೆಹಣ್ಣನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಹೊಳಪು ಬರುತ್ತದೆ.
ಬಾಳೆಹಣ್ಣಿಗೆ ನಿಂಬೆ ರಸ ಸೇರಿಸಿ ಕೆಲ ಹೊತ್ತು ಬಿಟ್ಟು, ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ.
ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ ಅಂಶವು ನಿಮ್ಮ ಕೂದಲನ್ನು ಸದೃಡವಾಗಿಸುತ್ತದೆ.
ಬಾಳೆಹಣ್ಣು ಮತ್ತು ಅರ್ಗಾನ್ ಎಣ್ಣೆಯನ್ನು ಸೇರಿಸಿ, ಕೂದಲಿಗೆ ಹಚ್ಚಿ.
ಬಾಳೆಹಣ್ಣಿನ ಸಿಲಿಕಾ ಅಂಶವು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಬಾಳೆಹಣ್ಣು, ಆಲಿವ್ ಎಣ್ಣೆ, ಮೊಟ್ಟೆಯನ್ನು ಬಳಸಿ ಹೇರ್ ಮಾಸ್ಕ್ ಹಾಕಿಕೊಳ್ಳಿ.
ಬಾಳೆಹಣ್ಣು, ಒಂದು ಕಪ್ ಪಪ್ಪಾಯಿ ಬಳಸಿ ಹೇರ್ ಮಾಸ್ಕ್ ಹಾಕಿದರೆ, ಕೂದಲು ಚೆನ್ನಾಗಿ ಬೆಳೆಯುತ್ತವೆ.