ಮನೆಯೊಳಗೆ ಪ್ರಾಣಿ ಅಥವಾ ಪಕ್ಷಿ ಬಂದರೆ ಶುಭ ಅಥವಾ ಅಶುಭ ಫಲಿತಾಂಶ ಎದುರಾಗುತ್ತದೆ ಎಂದು ಹೇಳಲಾಗುತ್ತದೆ. ಇದ್ದಕ್ಕಿದ್ದಂತೆ ಮನೆಯೊಳಗೆ ಬರುವ ಬಾವಲಿ ಕೂಡಾ ಕೆಲವು ಸಂಕೇತಗಳನ್ನು ನೀಡುತ್ತದೆ.
ಬಾವಲಿ ಮನೆಗೆ ಬರುವುದು ಅನಾರೋಗ್ಯದ ಸಂಕೇತ. ವಿಜ್ಞಾನದ ಪ್ರಕಾರ ಕೂಡಾ ಬಾವಲಿಗಳು ಆರೋಗ್ಯಕ್ಕೆ ಹಾನಿ ಮಾಡುವ ಬ್ಯಾಕ್ಟೀರಿಯಾ ವೈರಸ್ ಗಳನ್ನೂ ಹೊಂದಿರುತ್ತವೆ.
ಮನೆಯಲ್ಲಿ ಶುಚಿತ್ವದ ಹೊರತಾಗಿಯೂ ಬಾವಲಿಗಳು ಬಂದರೆ ಅಪಘಾತ ಅಥವಾ ಮನೆ ಸದಸ್ಯರ ಸಾವಿನ ಸಂಕೇತವನ್ನು ನೀಡುತ್ತದೆ.
ವೈವಾಹಿಕ ಜೀವನದಲ್ಲಿ ಅಪಶ್ರುತಿ ಕಾಣಿಸಿಕೊಳ್ಳುತ್ತದೆ. ಪತಿ ಪತ್ನಿ ನಡುವೆ ಜಗಳಕ್ಕೆ ಕಾರಣವಾಗುತ್ತದೆ.
ಮನೆಯೊಳಗೆ ಬಾವಲಿ ಸತ್ತು ಬಿದ್ದರೆ ಮನೆ ಮಂದಿಯ ಎಲ್ಲಾ ಕೆಲಸಗಳಲ್ಲಿಯೂ ಅಡೆತಡೆಗಳು ಎದುರಾಗುತ್ತವೆ. ವಾಸ್ತು ದೋಷಗಳು ಎದುರಾಗುತ್ತವೆ.
ಮನೆಯಲ್ಲಿ ಬಾವಲಿಗಳ ಪ್ರವೇಶದಿಂದ ಹಣ ನಷ್ಟವಾಗುತ್ತದೆ. ಸಾಲದ ಸುಳಿಗೆ ಸಿಲುಕಿಸುತ್ತದೆ.
ಇನ್ನು ಬಾವಲಿ ಮನೆಗೆ ಬಂದರೆ ಅದನ್ನು ಸಾಯಿಸಬಾರದು. ಇದು ಭವಿಷ್ಯಕ್ಕೆ ಹಾನಿ ಉಂಟು ಮಾಡುತ್ತದೆ.
ಬಾವಲಿಗಳು ಮನೆಯೊಳಗೇ ಬಂದರೆ ಏನಾಗುತ್ತದೆ ಎಂಬ ಚಿಂತೆ ಇದ್ದರೆ, ಅದರ ಪರಿಹಾರಗಳನ್ನು ಕಂಡುಕೊಂಡು ಅಶುಭ ಪರಿಣಾಮಗಳನ್ನು ತಪ್ಪಿಸಲು ಪರಿಹಾರ ಮಾರ್ಗಗಳನ್ನು ಕಂಡು ಕೊಳ್ಳಿ.