ಬೇಸಿಗೆಯಲ್ಲಿ ಸೌತೆಕಾಯಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಸೌತೆಕಾಯಿ ಸಿಪ್ಪೆಯಲ್ಲಿ ವಿಟಮಿನ್ ಕೆ, ವಿಟಮಿನ್ ಸಿ ಸೇರಿದಂತೆ ಅನೇಕ ಖನಿಜಗಳು ಮತ್ತು ವಿಟಮಿನ್‌ಗಳಿವೆ.
ಸಿಪ್ಪೆ ಸಮೇತ ಸೌತೆಕಾಯಿ ತಿನ್ನುವುದರಿಂದ ಕ್ರೆವಿಂಗ್ ಕಂಟ್ರೋಲ್ ಆಗುತ್ತದೆ. ಚಯಾಪಚಯ ಹೆಚ್ಚಾಗುತ್ತದೆ. ದೇಹ ತೂಕ ಕಡಿಮೆ ಮಾಡುವಲ್ಲಿ ಇದು ಸಹಾಯ ಮಾಡುತ್ತದೆ.
ಸ್ಕಿನ್ ಏಜಿಂಗ್ ಸಮಸ್ಯೆಯನ್ನು ನಿವಾರಿಸುತ್ತದೆ. ಇದರೊಂದಿಗೆ ಕೊಲೋಜನ್ ಪ್ರೊಡಕ್ಷನ್ ಅನ್ನು ಕೂಡಾ ಉತ್ತೇಜಿಸುತ್ತದೆ.
ಸೌತೆಕಾಯಿ ಸಿಪ್ಪೆಯಲ್ಲಿ ಫೈಬರ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಿಂದ ಮಲಬದ್ದತೆ ಸಮಸ್ಯೆ ನಿವಾರಣೆಯಾಗುತ್ತದೆ.
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ನೀರಿನ ಅಂಶದ ಕೊರತೆಯಾಗದಂತೆ ತಡೆಯಬಹುದು.
ಸೌತೆಕಾಯಿ ತಿನ್ನುವುದರಿಂದ ಕ್ಯಾನ್ಸರ್ ಅಪಾಯ ಕೂಡಾ ಕಡಿಮೆಯಾಗುತ್ತದೆ.
ಸೌತೆಕಾಯಿ ತಿನ್ನುವುದರಿಂದ ಕೂದಲು ಮತ್ತು ಉಗುರಿನ ಹೊಳಪು ಹೆಚ್ಚುತ್ತದೆ.
ಸೌತೆಕಾಯಿಯಲ್ಲಿರುವ ಕೆಲವು ಅಂಶಗಳು ಕಣ್ಣಿಗೆ ತಂಪು ನೀಡುತ್ತದೆ.