ದಾಳಿಂಬೆ ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ದೇಹಕ್ಕೆ ಬಹಳಷ್ಟು ಒಳ್ಳೆಯದು ಕೂಡ. ಆದರೆ ದಾಳಿಂಬೆ ಹಣ್ಣು ಮಾತ್ರವಲ್ಲ ಅದರ ಎಲೆಗಳು ಮತ್ತು ತೊಗಟೆ ಕೂಡ ಅನೇಕ ರೋಗಗಳನ್ನು ತಡೆಯುತ್ತದೆ. ಅಂದಹಾಗೆ ಈ ಎಲೆಯು ಕಹಿ ಸ್ವಾದವನ್ನು ಹೊಂದಿರುತ್ತದೆ.
ಆಯುರ್ವೇದದಲ್ಲಿ ದಾಳಿಂಬೆ ಎಲೆಗಳ ಕಷಾಯವನ್ನು ಕುಷ್ಠರೋಗ ಮತ್ತು ಚರ್ಮರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ದಿನಕ್ಕೆ ಎರಡು ಬಾರಿ ಸೇವಿಸಿದರೆ, ಋತುಮಾನದ ಕೆಮ್ಮು ಮತ್ತು ಶೀತದಿಂದ ಕೂಡ ಪರಿಹಾರವನ್ನು ಪಡೆಯಬಹುದು.
ತುರಿಕೆ ಮತ್ತು ಎಸ್ಜಿಮಾದಂತಹ ಚರ್ಮ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರೆ ದಾಳಿಂಬೆ ಎಲೆಗಳ ಪೇಸ್ಟ್ ಅನ್ನು ಲೇಪಿಸಿದರೆ ಅದು ಗುಣವಾಗುತ್ತದೆ. ಇದಲ್ಲದೆ, ದೇಹದ ಮೇಲಿನ ಹುಣ್ಣುಗಳು ಮತ್ತು ಗಾಯಗಳು ಬೇಗನೆ ಕಡಿಮೆಯಾಗುತ್ತವೆ.
ಕಿವಿ ನೋವಿನ ಸೋಂಕಿನಿಂದ ಬಳಲುತ್ತಿರುವವರು ದಾಳಿಂಬೆ ಎಲೆಗಳನ್ನು ಬಳಸಬಹುದು. ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯೊಂದಿಗೆ ಈ ಎಲೆ ರಸ ಬೆರೆಸಿ 2 ಹನಿಯಷ್ಟು ಎರಡು ಕಿವಿಗಳಿಗೆ ಹಾಕಿದರೆ ಕಿವಿ ನೋವು ಮತ್ತು ಸೋಂಕುಗಳು ಕಡಿಮೆಯಾಗುತ್ತದೆ.
ಬಾಯಿ ದುರ್ವಾಸನೆ, ವಸಡಿನ ಸಮಸ್ಯೆ, ಬಾಯಿ ಹುಣ್ಣು ಇದ್ದರೆ ದಾಳಿಂಬೆ ಎಲೆಗಳ ರಸವನ್ನು ನೀರಿಗೆ ಬೆರೆಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿ. ಇದು ಬಾಯಿಯ ಸಮಸ್ಯೆಗಳನ್ನು ತಡೆಯುತ್ತದೆ.
ಮುಖದ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಲು ಉತ್ತಮ ಸಲಹೆಯೆಂದರೆ ದಾಳಿಂಬೆ ಎಲೆಗಳ ಪೇಸ್ಟ್ ಅನ್ನು ಮೊಡವೆಗಳ ಮೇಲೆ ಲೇಪಿಸುವುದು. ಅಜೀರ್ಣ, ಮಲಬದ್ಧತೆ, ಗ್ಯಾಸ್, ಅತಿಸಾರದಂತಹ ಸಮಸ್ಯೆಗಳು ಆಗಾಗ ಬರುತ್ತಿದ್ದರೆ ದಾಳಿಂಬೆ ಎಲೆಗಳ ರಸವನ್ನು ದಿನಕ್ಕೆ ಎರಡು ಚಮಚ ಸೇವಿಸಬಹುದು.
ಲೇಖನದಲ್ಲಿ ಬರೆದ ಸಲಹೆಗಳು ಸಾಮಾನ್ಯ ಮಾಹಿತಿ ಮಾತ್ರ. ಯಾವುದೇ ರೀತಿಯ ಸಮಸ್ಯೆ ಅಥವಾ ಪ್ರಶ್ನೆಗೆ, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.