ತ್ವಚೆಗೆ ಕೇಸರ್-ಮಿಲ್ಕ್ ಫೇಸ್ ಪ್ಯಾಕ್‌ನ ಪ್ರಯೋಜನಗಳು

ಕೇಸರಿ-ಹಾಲು

ಕೇಸರಿ ಆರೋಗ್ಯದ ಜೊತೆಗೆ ಚರ್ಮಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಕೇಸರಿಯೊಂದಿಗೆ ಹಾಲನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ ಬಳಸುವುದರಿಂದ ಚರ್ಮಕ್ಕೆ ಹಲ್ವು ಪ್ರಯೋಜನಗಳಿವೆ.

ಕೇಸರ್-ಮಿಲ್ಕ್ ಫೇಸ್ ಪ್ಯಾಕ್‌

ಮೊದಲು ಕೇಸರಿ ಮತ್ತು ಹಾಲನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ. ಇದನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಅನ್ವಯಿಸಿ, ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಫೇಸ್ ವಾಶ್ ಮಾಡಿ. ನಿಯಮಿತವಾಗಿ ಇದನ್ನು ಬಳಸುವುದರಿಂದ ಸಿಗುವ ಪ್ರಯೋಜನಗಳೆಂದರೆ...

ಕಾಲಜನ್ ಉತ್ಪಾದನೆ

ನಿಯಮಿತವಾಗಿ ಕೇಸರಿ-ಹಾಲಿನ ಫೇಸ್ ಪ್ಯಾಕ್‌ ಬಳಸುವುದರಿಂದ ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಚರ್ಮದಲ್ಲಿ ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡಬಹುದು.

ಟ್ಯಾನಿಂಗ್

ಕೇಸರ್-ಮಿಲ್ಕ್ ಫೇಸ್ ಪ್ಯಾಕ್‌ ನಿಮಗೆ ಟ್ಯಾನಿಂಗ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಡ್ರೈ ಸ್ಕಿನ್

ಕೇಸರ್-ಮಿಲ್ಕ್ ಫೇಸ್ ಪ್ಯಾಕ್‌ ಬಳಸುವುದರಿಂದ ಇದು ತ್ವಚೆಗೆ ತೇವಾಂಶವನ್ನು ನೀಡುತ್ತದೆ. ಹಾಗಾಗಿ ಡ್ರೈ ಸ್ಕಿನ್ ಸಮಸ್ಯೆ ಇರುವವರಿಗೂ ಕೂಡ ಈ ಫೇಸ್ ಪ್ಯಾಕ್ ಪ್ರಯೋಜನಕಾರಿಯಾಗಿದೆ.

ಮೊಡವೆ

ಕೇಸರಿಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಮೊಡವೆಗಳನ್ನು ಗುಣಪಡಿಸುತ್ತದೆ.

ಚರ್ಮದ ಕಲೆ

ಈ ಫೇಸ್ ಪ್ಯಾಕ್ ಬಳಕೆಯಿಂದ ಮುಖದಲ್ಲಿ ಮೂಡಿರುವ ಕಲೆಗಳನ್ನು ಸುಲಭವಾಗಿ ನಿವಾರಿಸಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story