ಬೇಸಿಗೆಯಲ್ಲಿ ಅಲೋವೆರಾ ಬಳಕೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

Yashaswini V
Apr 09,2024

ಅಲೋವೆರಾ

ಅಲೋವೆರಾ ಲೋಳೆಸರ ಎಲ್ಲಾ ಋತುಮಾನಗಳಲ್ಲೂ ಬಹಳ ಸುಲಭವಾಗಿ ಬೆಳೆಯುವ ಸಸ್ಯ. ಅಲೋವೆರಾ ರಸ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.

ಲೋಳೆಸರ

ಬೇಸಿಗೆಯಲ್ಲಿ ಅಲೋವೆರಾ ರಸವನ್ನು ಎಂದರೆ ಲೋಳೆಸರವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ವಾಸ್ತವವಾಗಿ, ತಾಜಾ ಅಲೋವೆರಾ ತಿರುಳಿನಲ್ಲಿ ದೇಹದ ಉಷ್ಣತೆಯನ್ನು ನಿವಾರಿಸುವ ಶಕ್ತಿ ಇರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.

ಮಹಿಳೆಯರ ಆರೋಗ್ಯ

ಲೋಳೆಸರವು ಮಹಿಳೆಯರ ಮುಟ್ಟಿನ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಗುಣವನ್ನು ಹೊಂದಿದೆ.

ಉರಿಮೂತ್ರದ ಸಮಸ್ಯೆ

ಬೇಸಿಗೆಯಲ್ಲಿ ಉರಿಮೂತ್ರದ ಸಮಸ್ಯೆ ಸರ್ವೇ ಸಾಮಾನ್ಯವಾದ ಸಮಸ್ಯೆ. ಈ ಸಮಸ್ಯೆಗೂ ಅಲೋವೆರಾ ಅತ್ಯುತ್ತಮ ಪರಿಹಾರವಾಗಿದೆ. ಇದಕ್ಕಾಗಿ ಲೋಳೆಸರಕ್ಕೆ ಬೆಣ್ಣೆ, ಅರಿಶಿನ, ಕಾಳುಮೆಣಸಿನ ಪುಡಿ ಸೇವಿಸಿ.

ಚರ್ಮದ ಸೋಂಕಿನಿಂದ ರಕ್ಷಣೆ

ಅಲೋವೆರಾ ಜೆಲ್ ಅನ್ನು ಚರ್ಮಕ್ಕೆ ಹಚ್ಚುವುದರಿಂದ ಇದು ಚರ್ಮದ ಸೋಂಕಿನಿಂದ ರಕ್ಷಣೆಯನ್ನು ನೀಡುತ್ತದೆ. ಜೊತೆಗೆ ಉತ್ತಮ ಸೌಂದರ್ಯವರ್ಧಕವೂ ಹೌದು.

ಸುಟ್ಟ ಗಾಯಗಳು

ಸಣ್ಣ ಸುಟ್ಟಗಾಯಗಳ ಮೇಲೆ ಅಲೋವೇರಾವನ್ನು ಲೇಪಿಸುವುದರಿಂದ ಗಾಯಗಳಿಂದ ಪರಿಹಾರ ಪಡೆಯಬಹುದು.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story