ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ರಾಮಬಾಣ ಕಡಲೆಹಿಟ್ಟು
ಪ್ರತಿ ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಡಲೆಹಿಟ್ಟು ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣವಿದ್ದಂತೆ ಎಂದು ಹೇಳಲಾಗುತ್ತದೆ.
ಕಡಲೆ ಹಿಟ್ಟಿನ ಫೇಸ್ ಪ್ಯಾಕ್‌ಗಳ ಸಹಾಯದಿಂದ ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಸುಲಭ ಪರಿಹಾರ ಪಡೆಯಬಹುದು. ಅವುಗಳೆಂದರೆ...
ನಿತ್ಯ ಸಾಬೂನಿನ ಬದಲಿಗೆ ಕಡಲೆ ಹಿಟ್ಟಿನಿಂದ ಫೇಸ್ ವಾಶ್ ಮಾಡುವುದರಿಂದ ಚರ್ಮವನ್ನು ಶುಚಿಗೊಳಿಸಬಹುದು.
ಒಂದು ಸ್ಪೂನ್ ಕಡಲೆಹಿಟ್ಟಿನಲ್ಲಿ ಅಷ್ಟೇ ಪ್ರಮಾಣದ ಗಂಧದ ಪುಡಿ, ಸ್ವಲ್ಪ ಅರಿಶಿನ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಲೇಪಿಸಿ 15 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಮೊಡವೆಯಿಂದ ಮುಕ್ತಿ ದೊರೆಯುತ್ತದೆ.
ಒಂದು ಚೆನ್ನಾಗಿ ಮಾಡಿದ ಪಚ್ಚಬಾಳೆಹಣ್ಣನ್ನು ಮ್ಯಾಶ್ ಮಾಡಿ ಅದರಲ್ಲಿ 2 ಚಮಚ ಕಡಲೆಹಿಟ್ಟು, ಒಂದು ಚಮಚ ಹಾಲು ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಲೇಪಿಸಿ. 15-20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿನ ಮುಖ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಸುಕ್ಕುಗಳಿಂದ ಪರಿಹಾರ ಪಡೆಯಬಹುದು.
ಮೂಖದ ಮೇಲೆ ಮೂಡುವ ಬೇಡದ ಕೂದಲನ್ನು ನಿವಾರಿಸಲು ಕೂಡ ಕಡಲೆ ಹಿಟ್ಟು ರಾಮಬಾಣ. ಕಡಲೆಹಿಟ್ಟಿನಲ್ಲಿ ಮೆಂತ್ಯ ಪುಡಿಯನ್ನು ಸೇರಿಸಿ ಅದರ ಪೇಸ್ಟ್ ತಯಾರಿಸಿ ಬೇಡದ ಕೂದಲಿರುವ ಜಾಗದಲ್ಲಿ ಅನ್ವಯಿಸಿ. ಅದು ಡ್ರೈ ಆದ ಬಳಿಕ ಮೇಲ್ಮುಖವಾಗಿ ಉಜ್ಜುತ್ತ ಫೇಸ್ ವಾಶ್ ಮಾಡಿ.
ಒಂದು ಚಮಚ ಕಡಲೆ ಹಿಟ್ಟಿನಲ್ಲಿ 2 ಚಮಚ ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಟೊಮಾಟೊ ರಸ ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ, 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿದರೆ ಶೀಘ್ರದಲ್ಲೇ ಪರಿಣಾಮ ಗೋಚರಿಸುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.