ಲಡ್ಡೂ

ಎಳ್ಳು ಮತ್ತು ಬೆಲ್ಲದಿಂದ ತಯಾರಿಸಿದ ಲಡ್ಡೂ ಮಕರ ಸಂಕ್ರಾಂತಿಯ ಪ್ರಸಿದ್ಧ ಸಿಹಿ ತಿಂಡಿಗಳಲ್ಲಿ ಒಂದು.

Bhavishya Shetty
Jan 14,2023

ಗಜಕ್

ಬೆಲ್ಲ ಮತ್ತು ಕಡಲೆಕಾಯಿಗಳನ್ನು ಬಳಸಿ ತಯಾರಿಸಲಾಗುವ ಗಜಕ್ ಶ್ರೀಮಂತ ಮತ್ತು ಸುಲಭವಾಗಿ ತಯಾರಿಸಬಹುದಾದ ಸಿಹಿ ತಿಂಡಿ.

ಗುರ್

ಗುರ್ ಎಂದೂ ಕರೆಯಲ್ಪಡುವ ಬೆಲ್ಲದಿಂದ ತಯಾರಿಸಲ್ಪಡುವ ಈ ಸಿಹಿ ತಿಂಡಿಯನ್ನು ಮಕರ ಸಂಕ್ರಾಂತಿಯ ಸಮಯದಲ್ಲಿ ಮಾಡಿದರೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಮಕರ ಚೌಲ

ಮಕರ ಚೌಲ ಒಡಿಶಾದ ಫೇಮಸ್ ಸಿಹಿತಿನಿಸು. ಇದನ್ನು ಬೆಲ್ಲ, ಹಾಲು, ಬಾಳೆಹಣ್ಣು ಮತ್ತು ಕಬ್ಬಿನ ಜೊತೆಗೆ ತಾಜಾ ಅಕ್ಕಿಯನ್ನು ಬಳಸಿ ವಿಶೇಷವಾಗಿ ತಯಾರಿಸಲಾಗುತ್ತದೆ.

ಪಾಯಸ

ಪಾಯಸ ಎಲ್ಲರಿಗೂ ಅಚ್ಚುಮೆಚ್ಚು. ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸಿ ಕೂಡ ಈ ಸಿಹಿಯನ್ನು ತಯಾರಿಸಲಾಗುತ್ತದೆ

ಪಿನ್ನಿ

ಪಿನ್ನಿ ಎಂಬ ಸಿಹಿ ತಿನಿಸು ಪಂಜಾಬ್ ನಲ್ಲಿ ಸಿಕ್ಕಾಪಟ್ಟೆ ಫೇಮಸ್. ತುಪ್ಪ ಮತ್ತು ಒಣ ಹಣ್ಣುಗಳನ್ನು ಸೇರಿಸಿ, ಗೋಧಿಯಿಂದ ಮಾಡುವ ತಿನಿಸು.

ಸಂಕ್ರಾಂತಿ ಖಾದ್ಯ

ಗುಜರಾತ್ನಲ್ಲಿ ಮಕರ ಸಂಕ್ರಾತಿಯ ದಿನದಂದು ಆಲೂಗಡ್ಡೆ, ಬದನೆ, ಹಸಿರು ಬೀನ್ಸ್, ಗೆಣಸು, ಬಟಾಣಿ ಮತ್ತು ಹಸಿ ಬಾಳೆಹಣ್ಣುಗಳಂತಹ ತರಕಾರಿಗಳ ಮಿಶ್ರಣ ಮಾಡಿ ಮಸಾಲೆಯನ್ನು ತಯಾರಿಸಲಾಗುತ್ತದೆ.

ಪೊಂಗಲ್

ಸಿಹಿ ಮತ್ತು ಖಾರಾ ಪೊಂಗಲ್ ಸಂಕ್ರಾಂತಿ ಹಬ್ಬಕ್ಕೆ ಸಖತ್ ಫೇಮಸ್. ಅಕ್ಕಿ, ಹೆಸರುಕಾಳು, ತೆಂಗಿನಕಾಯಿ, ಗೋಡಂಬಿ, ಕರಿಬೇವಿನ ಎಲೆಗಳು ಮತ್ತು ತುಪ್ಪವನ್ನು ಬಳಸಿ ತಯಾರಿಸಿದ ಪೊಂಗಲ್ ದಕ್ಷಿಣ ಭಾರತದಲ್ಲಿ ಜನಪ್ರಿಯ ಭಕ್ಷ್ಯವಾಗಿದೆ.

VIEW ALL

Read Next Story