ಸುಂದರ ತ್ವಚೆಗಾಗಿ ಅತ್ಯುತ್ತಮ ಆಯುರ್ವೇದ ಫೇಸ್ ಪ್ಯಾಕ್‌ಗಳು

Published by: Yashaswini V | Jan 24, 2024

ಆಯುರ್ವೇದ

ಆಯುರ್ವೇದ ದೇಹದ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆಯ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.

Published by: Yashaswini V | Jan 24, 2024

ಆಯುರ್ವೇದ ಫೇಸ್ ಪ್ಯಾಕ್‌

ಆಯುರ್ವೇದ ಫೇಸ್ ಪ್ಯಾಕ್‌ಗಳ ಸಹಾಯದಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು. ಚರ್ಮವನ್ನು ಹಾನಿಯಿಂದ ರಕ್ಷಿಸಿ, ಮೊಡವೆ, ಸುಕ್ಕುಗಳಿಂದ ತ್ವಚೆಯನ್ನು ಕಾಪಾಡಿಕೊಳ್ಳಲು ಈ ಆಯುರ್ವೇದ ಫೇಸ್ ಪ್ಯಾಕ್‌ಗಳು ತುಂಬಾ ಪ್ರಯೋಜನಕಾರಿಯಾಗಿದೆ. ಅವುಗಳೆಂದರೆ...

Published by: Yashaswini V | Jan 24, 2024

ಕೇಸರಿ ಫೇಸ್ ಪ್ಯಾಕ್

ಹಾಲಿನೊಂದಿಗೆ ಕೇಸರಿಯನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಕಲೆರಹಿತ ತ್ವಚೆಯನ್ನು ನಿಮ್ಮದಾಗಿಸಬಹುದು.

Published by: Yashaswini V | Jan 24, 2024

ಗ್ರೀನ್ ಟೀ ಫೇಸ್ ಪ್ಯಾಕ್

ಗ್ರೀನ್ ಟೀಯಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಗುಣಗಳು ಸಮೃದ್ಧವಾಗಿದ್ದು ಇದನ್ನು ಫೇಸ್ ಪ್ಯಾಕ್ ಆಗಿ ಬಳಸುವುದರಿಂದ ಇದು ಮೊಡವೆಯಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

Published by: Yashaswini V | Jan 24, 2024

ಅರಿಶಿನದ ಫೇಸ್ ಪ್ಯಾಕ್

ಕಡಲೆಹಿಟ್ಟಿನೊಂದಿಗೆ ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

Published by: Yashaswini V | Jan 24, 2024

ಅಲೋವೆರಾ ಫೇಸ್ ಪ್ಯಾಕ್

ಅಲೋವೆರಾ ತ್ವಚೆಯ ಹಲವು ಸಮಸ್ಯೆಗಳನ್ನು ನಿವಾರಿಸಬಲ್ಲ ಅತ್ಯುತ್ತಮ ಔಷಧ. ಅಲೋವೆರಾ ಜೆಲ್ ಅನ್ನು ತೆಗೆದು 1 ಚಮಚ ರೋಸ್ ವಾಟರ್ ಮತ್ತು ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ. ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.

Published by: Yashaswini V | Jan 24, 2024

ಅಂಜೂರ ಫೇಸ್ ಪ್ಯಾಕ್

ಅಂಜೂರ ಮತ್ತು ಕುಂಬಳಕಾಯಿ ಎರಡನ್ನೂ ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಮತ್ತು ಅದಕ್ಕೆ ಬಾದಾಮಿ ಎಣ್ಣೆಯನ್ನು ಸೇರಿಸಿ ಮುಖಕ್ಕೆ ಹಚ್ಚಿ. ಇದರಿಂದ ಚರ್ಮದ ಕಲೆಗಳು ನಿವಾರಣೆಯಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Jan 24, 2024

VIEW ALL

Read Next Story