ಈ ಹಣ್ಣುಗಳಲ್ಲಿದೆ ಕೂದಲನ್ನು ಕಪ್ಪಾಗಿಸುವ ಗುಣ: ನಿತ್ಯ ಸೇವಿಸಿ

Bhavishya Shetty
Dec 15,2023

ಬಾಳೆಹಣ್ಣು

ಪೊಟ್ಯಾಸಿಯಮ್’ನ ಅತ್ಯುತ್ತಮ ಮೂಲ ಬಾಳೆಹಣ್ಣು. ಇದು ಅದು ಕೂದಲನ್ನು ಮೃದುವಾಗಿ ಮತ್ತು ಕಪ್ಪಾಗುವಂತೆ ಮಾಡುತ್ತದೆ. ಈ ಹಣನ್ನು ಪ್ರತಿದಿನ ತಿಂದರೆ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಪಪ್ಪಾಯಿ

ಪೋಷಕಾಂಶಗಳಿಂದ ಕೂಡಿದ ಪಪ್ಪಾಯಿ ಕೂದಲ ಬೆಳವಣಿಗೆಗೆ ಅತ್ಯುತ್ತಮ ಹಣ್ಣು. ಇದು ಬೋಳು ತಲೆಯಲ್ಲೂ ಕೂದಲು ಬೆಳೆಯುವಂತೆ ಮಾಡುತ್ತದೆ.

ಸ್ಟ್ರಾಬೆರಿ

ಕೂದಲಿನ ಬೆಳವಣಿಗೆಗೆ ಸ್ಟ್ರಾಬೆರಿ ಕೂಡ ಬೆಸ್ಟ್. ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ತಾಮ್ರದಂತಹ ಅಗತ್ಯವಾದ ಖನಿಜಗಳಿಂದ ಸಮೃದ್ಧವಾಗಿರುವ ಸ್ಟ್ರಾಬೆರಿಗಳು, ನೆತ್ತಿಯ ಮೇಲೆ ಶಿಲೀಂಧ್ರಗಳ ಸೋಂಕಿನ ಬೆಳವಣಿಗೆಯನ್ನು ತಡೆಯುತ್ತದೆ. ಹೀಗಾಗಿ ಕೂದಲನ್ನು ಕಪ್ಪಾಗಿಸಲು ಇದು ಸಹಾಯ ಮಾಡುತ್ತದೆ.

ನೆಲ್ಲಿಕಾಯಿ

ನೆಲ್ಲಿಕಾಯಿ ಕೂದಲು ಮತ್ತು ನೆತ್ತಿಯ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ದಶಕಗಳಿಂದ ಬಳಸಲಾಗುತ್ತಿದೆ. ಕೂದಲಿನ ಬೆಳವಣಿಗೆಗೆ ಆದ್ಯತೆಯ ಹಣ್ಣುಗಳಲ್ಲಿ ಒಂದಾಗಿದೆ.

ಕಿತ್ತಳೆ

ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಕಿತ್ತಳೆ ಕೂದಲ ಬೆಳವಣಿಗೆಗೆ ಪ್ರಮುಖ ಹಣ್ಣು.

ಸೇಬು

ದಿನಕ್ಕೊಂದು ಸೇಬನ್ನು ತಿನ್ನುವುದರಿಂದ ಕೂದಲಿನ ಸಮಸ್ಯೆ ದೂರವಾಗುತ್ತದೆ. ಈ ರಸಭರಿತವಾದ ಮತ್ತು ರುಚಿಕರವಾದ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಕಂಡುಬರುತ್ತದೆ.

ಪೇರಲ

ಪೇರಲ ರುಚಿಕರವಾದ ಹಣ್ಣು. ಇದರಲ್ಲಿ ವಿಟಮಿನ್ ಎ ಮತ್ತು ಸಿ ಇರುತ್ತವೆ. ಹೀಗಾಗಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ತಲೆಹೊಟ್ಟು ತಡೆಯುತ್ತದೆ.

VIEW ALL

Read Next Story