ಬೇಸಿಗೆಯಲ್ಲಿ ಸೂರ್ಯನ ಬಿಸಿಲು, ಬೆವರು ಪ್ರದೂಷಣೆಯ ಕಾರಣ ತ್ವಚೆಗೆ ಸಂಬಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮಸೂರ್ ದಾಲ್ ಅನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಈ ಪುಡಿಗೆ ಜೇನು ತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ. ಹೀಗೆ ಮಾಡಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.
ಟೊಮ್ಯಾಟೋ ಫೇಸ್ ಪ್ಯಾಕ್ ಬಳಸುವುದರಿಂದ ಟ್ಯಾನಿಂಗ್ ಕಡಿಮೆಯಾಗುತ್ತದೆ. ಇದಕ್ಕೆ ಟೊಮ್ಯಾಟೋವನ್ನು ರುಬ್ಬಿಕೊಂಡು ಇದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿಕೊಳ್ಳಿ. ಇದನ್ನೂ ಮುಖಕ್ಕೆ ಹಚ್ಚಿ 30 ನಿಮಿಷಗಳವರೆಗೆ ಹಾಗೆಯೇ ಬಿಟ್ಟು ನಂತರ ತೊಳೆಯಿರಿ.
ಎರಡು ಚಮಚ ಮೊಸರಿಗೆ ಸ್ವಲ್ಪ್ ಅರಶಿನ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಈಗ ಮುಖಕ್ಕೆ ಹಚ್ಚಿ.
ಪಪ್ಪಾಯ ಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಹೀಗೆ ಮಾಡಿ ವಾರಕ್ಕೆ ಎರಡರಿಂದ ಮೂರು ಬಾರಿ ಮುಖಕ್ಕೆ ಹಚ್ಚಬೇಕು.
ಸ್ವಲ್ಪ ಚಂದನ, ಚಿಟಿಕಿ ಅರಶಿನ, ಸ್ವಲ್ಪ ಹಾಲು ಬೆರೆಸಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನೂ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖವನ್ನು ತೊಳೆಯಿರಿ.
ಕಾಫಿ ಪುಡಿಯನ್ನು ಜೇನು ತುಪ್ಪದ ಜೊತೆ ಬೆರೆಸಿ ಮುಖಕ್ಕೆ ಹಚ್ಚಿ. ಈ ಮಿಶ್ರಣವನ್ನು ಮುಖದ ಮೇಲೆ 15 ನಿಮಿಷಗಳವರೆಗೆ ಬಿಟ್ಟು ತೊಳೆಯಿರಿ.
ಆಲೂಗಡ್ಡೆಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಈ ಪೇಸ್ಟ್ ಸಹಾಯದಿಂದ ಮುಖದ ಮಸಾಜ್ ಮಾಡಿ.