ಬ್ಲಾಕ್ ಹೆಡ್ಸ್ ಸಮಸ್ಯೆ ನಿವಾರಣೆಗೆ ಅತ್ಯುತ್ತಮ ಮನೆಮದ್ದುಗಳು

Yashaswini V
Feb 19,2024

ಬ್ಲಾಕ್ ಹೆಡ್ಸ್

ಬ್ಲಾಕ್ ಹೆಡ್ಸ್ ಸಾಮಾನ್ಯವಾಗಿ ಎಲ್ಲಾ ಋತುವಿನಲ್ಲೂ ಕಂಡು ಬರುವ ಸಾಮಾನ್ಯ ಚರ್ಮ ಸಮಸ್ಯೆ.

ಬ್ಲಾಕ್ ಹೆಡ್ಸ್ಗೆ ಕಾರಣ

ಬ್ಲಾಕ್ ಹೆಡ್ಸ್ ಗೆ ಎಣ್ಣೆಯುಕ್ತ ಚರ್ಮ, ಧೂಳು ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ, ಕೆಲವು ಮನೆಮದ್ದುಗಳನ್ನು ಬಳಸಿ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.

ಬಾಳೆಹಣ್ಣು

ಬಾಳೆಹಣ್ಣಿನ ಸಿಪ್ಪೆಯನ್ನು ಬ್ಲಾಕ್ ಹೆಡ್ಸ್ ಪೀಡಿತ ಪ್ರದೇಶದಲ್ಲಿ ಉಜ್ಜುವುದರಿಂದ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ರುಬ್ಬಿ ಅದರ ಪೇಸ್ಟ್ಗೆ ಸ್ವಲ್ಪ ಅರಿಶಿನ ಬೆರೆಸಿ ಬ್ಲಾಕ್ ಹೆಡ್ಸ್ ಪೀಡಿತ ಜಾಗದಲ್ಲಿ ಹಚ್ಚಿ ಅರ್ಧ ಗಂಟೆ ಬಳಿಕ ವಾಶ್ ಮಾಡಿ. ಇದರಿಂದ ನಿಮ್ಮ ಬ್ಲಾಕ್ ಹೆಡ್ಸ್ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ದೊರೆಯಲಿದೆ.

ಆಲೂಗಡ್ಡೆ ಸಿಪ್ಪೆ

ಹಸಿ ಆಲೂಗಡ್ಡೆ ಸಿಪ್ಪೆಯನ್ನು ಬಳಸಿ ಬ್ಲಾಕ್ ಹೆಡ್ಸ್ ಪೀಡಿತ ಪ್ರದೇಶದಲ್ಲಿ ಮಸಾಜ್ ಮಾಡುವುದರಿಂದ ಕೆಲವೇ ದಿನಗಳಲ್ಲಿ ಬ್ಲಾಕ್ ಹೆಡ್ಸ್ ಮಾಯವಾಗುತ್ತದೆ.

ಟೊಮಾಟೊ

ಟೊಮಾಟೊ ಸಿಪ್ಪೆ ತೆಗೆದು ಟೊಮಾಟೊವನ್ನು ಮ್ಯಾಚ್ ಮಾಡಿ ಇದನ್ನು ಬ್ಲಾಕ್ ಹೆಡ್ಸ್ ಪೀಡಿತ ಪ್ರದೇಶದಲ್ಲಿ ಹಚ್ಚಿ 5 ನಿಮಿಷಗಳ ಬಳಿಕ ವಾಶ್ ಮಾಡಿ. ಇದು ನಿಮ್ಮ ಬ್ಲಾಕ್ ಹೆಡ್ಸ್ ಸಮಸ್ಯೆಗೆ ಸುಲಭ ಪರಿಹಾರ ನೀಡಬಹುದು.

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story