ಚಳಿಗಾಲದಲ್ಲಿ ತುಟಿ ಒಡೆಯುವಿಕೆ ಸಮಸ್ಯೆಗೆ ಅತ್ಯುತ್ತಮ ಮನೆಮದ್ದುಗಳು

ಬಿರುಕು ತುಟಿ

ಚಳಿಗಾಲದಲ್ಲಿ ಚರ್ಮವು ತೇವಾಂಶ ಕಳೆದುಕೊಳ್ಳುವುದರಿಂದ ತುಟಿಗಳಲ್ಲಿ ಬಿರುಕು ಬಿಡುವುದು ಸಹಜ.

ಮನೆಮದ್ದು

ನೀವು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. ತುಟಿಗಳಲ್ಲಿ ಬಿರುಕು ಸಮಸ್ಯೆಗೆ ಟಾಪ್ 5 ಮನೆಮದ್ದುಗಳೆಂದರೆ...

ಅರಿಶಿನ

ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕಾಲು ಚಮಚ ಹಾಲಿಗೆ 2 ಚಿಟಿಕೆ ಅರಿಶಿನವನ್ನು ಬೆರೆಸಿ ತುಟಿಗಳಿಗೆ ಹಚ್ಚಿ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯನ್ನು ತುಟಿಗಳಿಗೆ ಹಚ್ಚುವುದರಿಂದ ಇದು ತುಟಿಗಳನ್ನು ಹೈಡ್ರೀಕರಿಸುತ್ತದೆ. ಜೊತೆಗೆ ಬಿರುಕು ಮೂಡುವುದನ್ನು ತಪ್ಪಿಸುತ್ತದೆ.

ಸಕ್ಕರೆ

ಸಕ್ಕರೆ ಅತ್ಯುತ್ತಮ ಎಕ್ಸ್‌ಫೋಲಿಯೇಟರ್ ಆಗಿದೆ. ಸಕ್ಕರೆಯೊಂದಿಗೆ ಜೇನುತುಪ್ಪ ಬೆರೆಸಿ ಇದರಿಂದ ತುಟಿಗಳನ್ನು ಲಘುವಾಗಿ ಸ್ಕ್ರಬ್ ಮಾಡುವುದರಿಂದ ತುಟಿಗಳು ಮೃದುವಾಗುತ್ತದೆ.

ಅಲೋವೆರಾ

ಅಲೋವೆರಾ ತುಟಿಗಳಿಗೆ ಚಿಕಿತ್ಸೆ ನೀಡಬಲ್ಲ ಅತ್ಯುತ್ತಮ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆಯನ್ನು ತುಟಿಗಳಿಗೆ ಹಚ್ಚುವುದರಿಂದ ಇದು ತುಟಿಗಳನ್ನು ಮೃದುವಾಗಿಸುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story