ಹೀಗೆ ಮಾಡಿದರೆ ಮನೆಯಲ್ಲಿಯೇ ಸುಲಭವಾಗಿ ಬೆಳೆಸಬಹುದು ರಾಶಿ ರಾಶಿ ಸೌತೆಕಾಯಿ !

Ranjitha R K
Feb 27,2025


ಬೇಸಿಗೆ ಆರಂಭವಾಗುತ್ತಿದ್ದ ಹಾಗೆಯೇ ಮನೆಯ ಪಾಟ್ ನಲ್ಲಿ ಸೌತೆಕಾಯಿಯನ್ನು ಸುಲಭವಾಗಿ ಬೆಳೆಸಬಹುದು.


ಹಾಗಿದ್ದರೆ ಪಾಟ್ ನಲ್ಲಿ ಸೌತೆಕಾಯಿ ಬೆಳೆಸುವ ಸುಲಭ ವಿಧಾನ ಯಾವುದು ನೋಡೋಣ.


ಇದಕ್ಕಾಗಿ ಉತ್ತಮ ಗುಣಮಟ್ಟದ ಬೀಜ, ಮಣ್ಣು ಮತ್ತು ಸರಿಯಾದ ಗಾತ್ರದ ಪಾಟ್ ಬೇಕಾಗುತ್ತದೆ.


ಉತ್ತಮ ಗುಣಮಟ್ಟದ ಬೀಜವನ್ನು ಆರಿಸಿದ ಬಳಿಕ ಪಾಟ್ ನಲ್ಲಿ ಮಣ್ಣು ಮತ್ತು ಗೊಬ್ಬರವನ್ನು ಮಿಶ್ರಣ ಮಾಡಿ.


ಪಾಟ್ ಕೆಳಗೆ ನೀರು ಹರಿದು ಹೋಗಲು ತೂತು ಮಾಡಿ. ಬೀಜವನ್ನು 2 ರಿಂದ ಇಂಚು ಕೆಳಗೆ ಹಾಕಿ.


ಪಾಟ್ ಅನ್ನು ಬಿಸಿಲು ಮತ್ತು ನೆರಳು ಎರಡೂ ಬೀಳುವ ಸ್ಥಳದಲ್ಲಿ ಇಡಿ. ದಿನಕ್ಕೆ ಒಂದು ಬಾರಿ ತಪ್ಪದೇ ನೀರು ಹಾಕಿ.


ಬಳ್ಳಿ ಬೆಳೆದಂತೆ ಅದನ್ನು ಕೋಲಿನ ಸಹಾಯದಿಂದ ಕಟ್ಟಿ. ಕೀಟ ಬಾಧೆಯಾಗದಂತೆ ಗೊಬ್ಬರ ಹಾಕಿ.


ಹೀಗೆ ಮಾಡಿದರೆ ಒಂದೆರಡು ತಿಂಗಳಲ್ಲಿಯೇ ಸೌತೆಕಾಯಿ ಬೆಳೆಯುತ್ತದೆ.


ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story