ಆಚಾರ್ಯ ಚಾಣಕ್ಯರ ನೀತಿ ಶಾಸ್ತ್ರದಲ್ಲಿ ಬಡತನವನ್ನು ತೊಲಗಿಸಿ, ಸಿರಿತನವನ್ನು ವೃದ್ದಿಸುವ ವಿಚಾರಗಳನ್ನು ಉಲ್ಲೇಖಿಸಲಾಗಿದೆ.
ಆರ್ಥಿಕ ಸಂಕಷ್ಟದಿಂದ ಪಾರಾಗಲು ಧನಾತ್ಮಕ ಚಿಂತನೆ ಅಗತ್ಯ ಎನ್ನುತ್ತಾರೆ ಚಾಣಕ್ಯರು.
ನಕಾರಾತ್ಮಕ ಆಲೋಚನೆಗಳು ವ್ಯಕ್ತಿಯನ್ನು ಆವರಿಸಿದಾಗ ಅವರು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಸಾಧ್ಯ ಎನ್ನುತ್ತದೆ ನೀತಿ ಶಾಸ್ತ್ರ.
ಚಾಣಕ್ಯರ ಪ್ರಕಾರ, ಜೀವನದಲ್ಲಿ ಯಶಸ್ವಿಯಾಗಲು ಒಬ್ಬರು ಅಪಾಯಗಳನ್ನು ಎದುರಿಸಬೇಕು.
ಆಚಾರ್ಯ ಚಾಣಕ್ಯರ ಪ್ರಕಾರ ಜೀವನದಲ್ಲಿ ಬರುವ ಕಷ್ಟಗಳನ್ನು ಯಾರು ಎದುರಿಸಲು ಸಾಧ್ಯವೋ ಅವರೇ ಜೀವನದಲ್ಲಿ ಗೆಲುವನ್ನು ಸಾಧಿಸುತ್ತಾರೆ.
ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಿ ನಿಲ್ಲಬೇಕಾದರೂ, ಯೋಜನೆ ತುಂಬಾ ಮುಕ್ಯ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.
ಕಠಿಣ ಪರಿಶ್ರಮವಿಲ್ಲದೆ ಜೀವನದಲ್ಲಿ ಯಶಸ್ಸು ಸಿಗುವುದಿಲ್ಲ ಎಂದು ಚಾಣಕ್ಯರ ನೀತಿ ಶಾಸ್ತ್ರದಲ್ಲಿ ಉಲ್ಲೇಕಖಿಸಲಾಗಿದೆ.
ಧೈರ್ಯದಿಂದ ಗುರಿಯನ್ನು ಬೆನ್ನಟ್ಟುವವನು ಯಶಸ್ಸು ಪಡೆಯುವುದು ಖಚಿತ ಎನ್ನುತ್ತದೆ ಚಾಣಕ್ಯರ ನೀತಿ ಶಾಸ್ತ್ರ.