ಕೆಲವೊಮ್ಮೆ ಕಾವಲಿಯನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ, ದಪ್ಪ ಕಪ್ಪು ಪದರವು ಅದರ ಮೇಲೆ ಸಂಗ್ರಹಗೊಳ್ಳುತ್ತದೆ. ಕಾವಲಿ ಮೇಲೆ ಸಂಗ್ರಹವಾಗುವ ಈ ಜಿಡ್ಡಿನ ಪದರವನ್ನು ಕೆಲವೇ ನಿಮಿಷಗಳಲ್ಲಿ ಸ್ವಚ್ಛಗೊಳಿಸುವ ಉಪಾಯ ಇಲ್ಲಿದೆ.
ದೊಡ್ಡ ಪಾತ್ರೆಯಲ್ಲಿ ನೀರು ಬಿಸಿ ಮಾಡಿ. ಕಾವಲಿಯನ್ನು ಆ ಬಿಸಿ ನೀರಿನಲ್ಲಿ ಸ್ವಲ್ಪ ಸಮಯದವರೆಗೆ ಹಾಗೆಯೇ ಬಿಡಿ. ಕಾವಲಿ ಸ್ವಚ್ಛ ಮಾಡಲು ಇದು ಸಹಾಯ ಮಾಡುತ್ತದೆ.
ಅರ್ಧ ಲೋಟ ನೀರಿಗೆ 2 ಚಮಚ ಅಡುಗೆ ಸೋಡಾ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ.
ಕಾವಲಿ ಮೇಲೆ ತಯಾರಿಸಿದ ಅಡುಗೆ ಸೋಡಾ ಪೇಸ್ಟ್ ಅನ್ನು ಹಾಕಿ. 5 ನಿಮಿಷಗಳವರೆಗೆ ಹಾಗೆಯೇ ಬಿಡಿ. ಮತ್ತೊಂದೆಡೆ ಒಂದು ಬಟ್ಟಲಿಗೆ 2-3 ಚಮಚ ಹೈಡ್ರೋಜನ್ ಪೆರಾಕ್ಸೈಡ್ ಬೆರೆಸಿ.
ಈಗ ಸ್ಕ್ರಬ್ ಅನ್ನು ಈ ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣದಲ್ಲಿ ಅದ್ದಿ ಕಾವಲಿಯನ್ನು ಕ್ಲೀನ್ ಮಾಡಿ.
ಹೈಡ್ರೋಜನ್ ಪೆರಾಕ್ಸೈಡ್ ನಿಮ್ಮ ಬಳಿ ಇಲ್ಲ ಎಂದಾದರೆ ಅಡುಗೆ ಸೋಡಾ ಮತ್ತು ಸ್ಯಾಂಡ್ ಪೇಪರ್ ತೆಗೆದುಕೊಂಡು ಕಾವಲಿ ಸ್ವಚ್ಛ ಮಾಡಬಹುದು.
ಸ್ಯಾಂಡ್ ಪೇಪರ್ ನೊಂದಿಗೆ ಕಾವಲಿ ಸ್ವಚ್ಛ ಮಾಡಲು ಒಂದು ಪಾತ್ರೆಯಲ್ಲಿ ಅಡುಗೆ ಸೋಡಾ ಮತ್ತು ನೀರು ಬೆರಸಿ ದಪ್ಪ ಪೇಸ್ಟ್ ಮಾಡಿಕೊಂಡು ಇದನ್ನು ಕಾವಲಿ ಮೇಲೆ ಹರಡಿ 5 ನಿಮಿಷ ಬಿಡಿ.
ಈಗ ಕಾವಲಿ ಮೇಲೆ ಸ್ವಲ್ಪ ನೀರು ಹಾಕಿ ಸ್ಯಾಂಡ್ ಪೇಪರ್ ನಿಂದ ಉಜ್ಜುವ ಮೂಲಕ ಕಾವಲಿ ಸ್ವಚ್ಛಗೊಳಿಸಿ.
ಈ ರೀತಿಯಾಗಿ ಕಾವಲಿಯನ್ನು ಸುಲಭವಾಗಿ ಹೊಳೆಯುವಂತೆ ಮಾಡಬಹುದು.