ಬಿಳಿಕೂದಲನ್ನು ಬುಡದಿಂದಲೇ ಕಪ್ಪಾಗಿಸುತ್ತೆ ತೆಂಗಿನ ಸಿಪ್ಪೆಯ ಹೇರ್ ಡೈ

Bhavishya Shetty
Aug 30,2023


ತೆಂಗನ್ನು ಕಲ್ಪವೃಕ್ಷವೆನ್ನುತ್ತಾರೆ. ಅಂತಹ ವೃಕ್ಷದ ಪ್ರತಿಯೊಂದು ಭಾಗವೂ ಮಾನವನ ಜೀವನದಲ್ಲಿ ಬಳಕೆಯಾಗುತ್ತದೆ ಎಂದು ಹೇಳಲಾಗುತ್ತದೆ. ಇಂದು ನಾವು ತೆಂಗಿನ ಸಿಪ್ಪೆಯ ಆರೋಗ್ಯ ಪ್ರಯೋಜನದ ಬಗ್ಗೆ ಮಾತನಾಡಲಿದ್ದೇವೆ.


ತೆಂಗಿನ ಸಿಪ್ಪೆಯನ್ನು ಸುಟ್ಟು ಅದರ ಪುಡಿಯನ್ನು ತಯಾರಿಸುವ ಮೂಲಕ ಹಲವು ರೀತಿಯಲ್ಲಿ ಬಳಸಬಹುದು. ತೆಂಗಿನ ಸಿಪ್ಪೆಯನ್ನು ಬಳಸುವ ವಿಧಾನಗಳು ಮತ್ತು ಪ್ರಯೋಜನಗಳನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.


ಊತವನ್ನು ತೆಗೆದುಹಾಕಲು ತೆಂಗಿನ ಸಿಪ್ಪೆಯನ್ನು ಬಳಸಬಹುದು. ಊತ ಉಂಟಾದಾಗ ನಾವು ತೆಂಗಿನ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ, ಆದರೆ ತೆಂಗಿನ ಸಿಪ್ಪೆಯು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ತೆಂಗಿನ ಸಿಪ್ಪೆಯನ್ನು ಪುಡಿ ಮಾಡಿ ಅದಕ್ಕೆ ಅರಿಶಿನ ಸೇರಿಸಿ, ನಂತರ ಈ ಪೇಸ್ಟ್ ಅನ್ನು ಊತದ ಜಾಗಕ್ಕೆ ಲೇಪಿಸಿ. ಕೊಂಚ ಸಮಯದ ಬಳಿಕ ಊತ ಕಡಿಮೆಯಾಗುತ್ತದೆ.


ತೆಂಗಿನ ಸಿಪ್ಪೆಯಿಂದ ನೈಸರ್ಗಿಕವಾಗಿ ಬಿಳಿಕೂದಲನ್ನು ಕಪ್ಪಾಗಿಸಬಹುದು. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಬಳಸಬೇಕಾಗಿಲ್ಲ.


ತೆಂಗಿನ ಸಿಪ್ಪೆಯನ್ನು ಬಾಣಲೆಯಲ್ಲಿ ತೆಗೆದುಕೊಂಡು ಅದನ್ನು ಬಿಸಿ ಮಾಡಬೇಕು. ಸಿಪ್ಪೆ ಚೆನ್ನಾಗಿ ಉರಿದ ಬಳಿಕ ಅದನ್ನು ಪುಡಿಯನ್ನು ಮಾಡಿ. ಆ ಪುಡಿಯಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿ ಒಂದು ಗಂಟೆಯ ನಂತರ ತೊಳೆಯಿರಿ.


ಮುಟ್ಟಿನ ಸಮಯದಲ್ಲಿ ತೀವ್ರವಾದ ನೋವಿನ ಸಮಸ್ಯೆ ಇರುವ ಮಹಿಳೆಯರು ತೆಂಗಿನ ಸಿಪ್ಪೆಯನ್ನು ಸಹ ಬಳಸಬಹುದು. ತೆಂಗಿನ ಸಿಪ್ಪೆಯ ಬೂದಿಯನ್ನು ತಯಾರಿಸಬೇಕು. ತಯಾರಾದ ಭಸ್ಮವನ್ನು ಒಂದು ಲೋಟ ನೀರಿನೊಂದಿಗೆ ಮಿಕ್ಸ್ ಮಾಡಿ ಕುಡಿದರೆ ನೋವಿನ ಸಮಸ್ಯೆ ದೂರವಾಗುತ್ತದೆ.


(ತೆಂಗಿನ ಸಿಪ್ಪೆಯನ್ನು ಆಯುರ್ವೇದದಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾರೆ, ಈ ವಿಧಾನಗಳನ್ನು ಪ್ರಯತ್ನಿಸುವಾಗ ಚರ್ಮದ ಅಲರ್ಜಿ ಅಥವಾ ದೈಹಿಕ ಸಮಸ್ಯೆ ಕಂಡುಬರಬಹುದು. ಹೀಗಾಗಿ ಬಳಕೆಗೆ ಮುನ್ನ ವೈದ್ಯರ ಸಲಹೆ ಸ್ವೀಕರಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)

VIEW ALL

Read Next Story