ಬಿಳಿ ಕೂದಲಿನ ಸಮಸ್ಯೆ ಎನ್ನುವುದು ಇತ್ತೀಚೆಗೆ ಎಲ್ಲರನ್ನೂ ಕಾಡುತ್ತಿರುವ ಸಾಮಾನ್ಯವಾದ ಸಮಸ್ಯೆ.
ವಯೋಮಿತಿ ಇಲ್ಲದೆ ಬಿಳಿ ಕೂದಲಿನ ಸಮಸ್ಯೆ ಅನೇಕರನ್ನು ಕಾಡುತ್ತಿದೆ, ಇದು ಸುಂದರವಾಗಿ ಕಾಣುವುದರಿಂದ ತಪ್ಪಿಸುತ್ತದೆ.
ಅನೇಕ ಜನರು ಬಿಳಿ ಕೂದಲನ್ನು ಕಪ್ಪಾಗಿಸಲು ವಿವಿಧ ರೀತಿಯ ಟಿಪ್ಸ್ ಹಾಗೂ ಡೈಗಳನ್ನು ಉಪಯೋಗಿಸುತ್ತರೆ.
ಯಾವುದೇ ಟಿಪ್ಸ್, ಹಾಗೂ ಹೇರ್ ಡೈನ ಬಳಕೆ ಇಲ್ಲದೆ ನಿಮ್ಮ ಕೂದಲನ್ನು ನೀವು ಮನೆಯಲ್ಲಿಯೇ ಕಪ್ಪಾಗಿಸಬಹುದು.
ತೆಂಗಿನ ಎಣ್ಣೆ ನಿಮ್ಮ ಕೂದಲನ್ನು ಬಲ ಪಡಿಸಿ, ಉದುರುವಿಕೆಯಿಂದ ತಪ್ಪಿಸಲು ಸಾಕಷ್ಟು ಸಹಾಯ ಮಾಡುತ್ತದೆ.
ತೆಂಗಿನ ಎಣ್ಣೆಯನ್ನು ಬಳಸಿ ನಿಮ್ಮ ಕೂದಲನ್ನು ನೀವು ಕಪ್ಪಗಿಸಬಹುದು, ಆದರೆ ಅದಕ್ಕೆ ಈ ಪುಡಿಯನ್ನು ಸಹ ಬಳಸಬೇಕು.
ಮೆಹಂದಿ ಎಲೆಗಳನ್ನು ಒಣಗಿಸಿ, ಅದನ್ನು ರುಬ್ಬಿ ನುಣ್ಣಗೆ ಪುಡಿ ಮಾಡಿ.
ಈ ಪುಡಿಯನ್ನು ತೆಂಗಿನ ಎಣ್ಣೆಗೆ ಬೆರಸಿ ಹಚ್ಚಿ 1 ಗಂಟೆ ಒಣಗಲು ಬಿಡಿ
ಚೆನ್ನಾಗಿ ಒಣಗಿದ ನಂತರ ಶಾಂಪುವಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ.
ಈ ರೀತಿ ಮಾಡುವುದರಿಂದ ನಿಮ್ಮ ಕೂದಲು ಬುಡದಿಂದಲೇ ಕಪ್ಪಾಗುತ್ತದೆ.