ಎಳನೀರು ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದ್ದು ತೂಕ ಇಳಿಕೆಯ ಪ್ರಯತ್ನಗಳಿಗೆ ಅತಿ ಹೆಚ್ಚಿನ ನೆರವು ನೀಡುತ್ತದೆ. ಅಲ್ಲದೇ ಅಗತ್ಯವಿರುವ ಶಕ್ತಿಯನ್ನು ತಕ್ಷಣವೇ ಒದಗಿಸುವುದು, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು, ಸೂಕ್ಷ್ಮಜೀವಿಗಳಿಂದ ರಕ್ಷಣೆ ಒದಗಿಸುವುದು, ಮೂತ್ರದ ಪ್ರಮಾಣ ವರ್ಧಿಸಿ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. * ನಿತ್ಯವೂ ಬೆಳಗ್ಗಿನ ಪ್ರಥಮ ಆಹಾರವಾಗಿ ಒಂದು ಭರ್ತಿ ಎಳನೀರನ್ನು ಕುಡಿದರೆ ದಿನದ ಅಗತ್ಯದ ಎಲೆಕ್ಟ್ರೋಲೈಟುಗಳು ಲಭಿಸುತ್ತವೆ ಹಾಗೂ ಇವು ಅಧಿಕ ರಕ್ತದೊತ್ತಡ ಎದುರಾಗದಂತೆ ತಡೆಯುತ್ತವೆ. * ಎಳನೀರು ಥೈರಾಯ್ಡ್ ಗ್ರಂಥಿಯ ಸ್ರವಿಕೆಗೆ ಪ್ರಚೋದನೆ ಒದಗಿಸುತ್ತದೆ.
ಪ್ರತಿದಿನ ಬೆಳಿಗೆ ನೀರಿನಿಂದ ಮುಖ ತೊಳೆದ ಬಳಿಕ ಬಳಿಕ ಕೊಂಚ ಎಳನೀರನ್ನು ಕೈಗೆ ತೆಗೆದುಕೊಂಡು ಮುಖಕ್ಕೆ ನೇರವಾಗಿ ಚಿಮುಸಿಕೊಳ್ಳಿ ಮುಖ ಕಾಂತಿಯುಕ್ತವಾಗಿರಿಸುತ್ತದೆ.
ವಾರದಲ್ಲಿ ಎರಡು ಬಾರಿ ಎಳನೀರಿನಿಂದ ಮಸಾಜ್ ಮಾಡಿದರೆ ಕೂದಲಿನ ಗಂಟನ್ನು ಕಡಿಮೆ ಮಾಡುತ್ತದೆ ಹಾಗೆಯೇ ವೃಧುವಾಗಿಸಲು ಸಹಾಯ ಮಾಡುತ್ತದೆ.
ಎಳೆನೀರನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಸವರಿ ಮಸಾಜ್ ಮಾಡುವುದರಿಂದ ಮೊಡವೆಗಳ ನಿವಾರಣೆ ಮಾಡುತ್ತದೆ.
ಚರ್ಮ ಗಢಸಾಗಿದ್ದರೇ ಪ್ರತಿನಿತ್ಯ ಎಳೆನೀರನ್ನು ಕೈಗಳ ಮೇಲೇ ಹಚ್ಚುವುದರಿಂದ ಕೋಮಲ ಚರ್ಮ ನಿಮ್ಮದಾಗಿಸುತ್ತದೆ.
ಎಳನೀರಿಗೆ ಅರಿಶಿನ ಪುಡಿ ಹಚ್ಚಿಕೊಂಡು ಮುಖಕ್ಕೆ ಹಚ್ಚುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ. ಎಳನೀರಿಗೆ ಸೌತೆಕಾಯಿ ರಸಮಿಕ್ಸ್ಮಾಡಿ ಹಚ್ಚುವುದರಿಂದಲೂ ತ್ವಚೆ ಆರೋಗ್ಯಯುತವಾಗಿ ಕಂಗೊಳಿಸುತ್ತದೆ.
ಬಿಸಿಲಿನಿಂದ ಚರ್ಮದ ಮೇಲಾಗುವ ಟ್ಯಾನ್ಸ ಹನಿಯ ಮಿತವಾಗಿಕೈ, ಮುಖಕ್ಕೆ ಎಳನೀರು ಹಚ್ಚುವುದರಿಂದ ಕಡಿಮೆ ಯಾಗುತ್ತದೆ. ಮುಲ್ತಾನಿಮಿಟ್ಟಿ ಜತೆ ಎಳನೀರು ಸೇರಿಸಿ ಹಚ್ಚುವುದರಿಂದ ಟ್ಯಾನ್ಜತೆಗೆ ಮುಖದ ಮೇಲಿರುವ ಕಲೆ ಸಹ ನಿವಾರಣೆಯಾಗುತ್ತದೆ.