ಈ ಸಮಸ್ಯೆಗಳಿದ್ದರೆ ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಟೀ ಕುಡಿಯಿರಿ

Ranjitha R K
Feb 17,2023


ಬ್ಲಾಕ್ ಟೀಯನ್ನು ಬಹಳಷ್ಟು ಮಂದಿ ಇಷ್ಟಪಟ್ಟು ಸೇವಿಸುತ್ತಾರೆ. ಆದರೆ ಇದನ್ನೂ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆರೋಗ್ಯದ ನಾನಾ ಸಮಸ್ಯೆಗಳು ದೂರವಾಗುತ್ತವೆ.


ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಟೀ ಕುಡಿದರೆ ಮೆಂಟಲ್ ಹೆಲ್ತ್ ಚೆನ್ನಾಗಿರುತ್ತದೆ. ದಿನವಿಡೀ ನೀವು ಮಾಡುವ ಕೆಲಸದಲ್ಲಿ ಫೋಕಸ್ ಮಾಡಬಹುದು. ಇದರಲ್ಲಿರುವ ಕೆಫಿನ್ ಮತ್ತು ಅಮಿನೊ ಆಸಿಡ್ ಹೆಚ್ಚು ಅಲರ್ಟ್ ಆಗಿರಲು ಸಹಾಯ ಮಾಡುತ್ತದೆ.


ಒರಲ್ ಹೆಲ್ತ್ ಗೆ ಕೂಡಾ ಇದು ಬೆಸ್ಟ್. ಹಲ್ಲಿನಲ್ಲಿ ಅಂಟಿಕೊಂಡಿರುವ ಕೊಳಕನ್ನು ಇದು ತೆಗೆದು ಹಾಕಲು ಸಹಾಯ ಮಾಡುತ್ತದೆ.


ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಟೀ ಕುಡಿಯುವುದು ಡಯಾಬಿಟೀಸ್ ರೋಗಿಗಳಿಗೆ ಲಾಭದಾಯಕ. ಇದು ಇನ್ಸುಲಿನ್ ಸೆನ್ಸಿಟಿವಿಟಿಯನ್ನು ಉತ್ತಮಗೊಳಿಸುತ್ತದೆ.


ಬ್ಲಾಕ್ ಟೀ ದಿನವಿಡೀ ದೇಹವನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಸಿಂದ ಆರಂಭ ಬ್ಲಾಕ್ ಟೀಯಿಂದ ಆದರೆ ದಿನವಿಡೀ ಫ್ರೆಶ್ ಆಗಿರಲು ಸಾಧ್ಯವಾಗುತ್ತದೆ.


ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಟೀ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.


ಹೃದಯದ ಆರೋಗ್ಯಕ್ಕೆ ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಟೀ ಕುಡಿಯುವುದು ಬಹಾ ಪ್ರಯೋಜನಕಾರಿ. ಇದು ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ.


ಖಾಲಿ ಹೊಟ್ಟೆಯಲ್ಲಿ ಬ್ಲಾಕ್ ಟೀ ಕುಡಿಯುವುದರಿಂದ ತ್ವಚೆಯ ಆರೋಗ್ಯ ಕೂಡಾ ವೃದ್ದಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಲರ್ಜಿ, ತುರಿಕೆ , ಉರಿ ಮುಂತಾದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.


ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ

VIEW ALL

Read Next Story