ಅನೇಕರಿಗೆ ಬೆಳಿಗ್ಗೆ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಅನೇಕ ಜನರು ದಿನವಿಡೀ ಹಲವಾರು ಕಪ್ ಚಹಾವನ್ನು ಕುಡಿಯುತ್ತಾರೆ.ಆದರೆ ಇದು ಹಾನಿಕಾರಕ ಹವ್ಯಾಸ.
ಬೆಳಿಗ್ಗೆ ಚಹಾದ ಬದಲು ಗ್ರೀನ್ ಟೀ ಸೇವಿಸಬಹುದು. ಇದು ಆರೋಗ್ಯಕರ ಪಾನೀಯ.
ಅರಶಿನ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು.
ಬೆಳಿಗ್ಗೆ ಲೆಮನ್ ಟೀ ಕುಡಿಯಬಹುದು. ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿದ್ದರೆ ಅಥವಾ ಸುಂದರ ತ್ವಚೆ ಬೇಕಾಗಿದ್ದರೆ ಲೆಮನ್ ಟೀ ಕುಡಿಯಬಹುದು.
ಇನ್ನು ಚಹಾದ ಬದಲಿಗೆ ಹಣ್ಣು ತರಕಾರಿಗಳನ್ನು ಬಳಸಿ ಸ್ಮೂಥಿ ತಯಾರಿಸಿ ಸೇವಿಸಬಹುದು.
ತೂಕ ಇಳಿಸಿಕೊಳ್ಳುವವರು ಕೇಸರಿಯ ನೀರನ್ನು ಕೂಡಾ ಕುಡಿಯಬಹುದು.
ಜೇನುತುಪ್ಪವನ್ನು ಬೆರೆಸಿದ ನೀರನ್ನು ಸೇವಿಸುವ ಮೂಲಕ ಕೂಡಾ ದಿನದ ಆರಂಭ ಮಾಡಬಹುದು.
ಬೆಳಿಗ್ಗೆ ಚಹಾದ ಬದಲಿಗೆ ಬ್ಲಾಕ್ ಕಾಫೀ ಸೇವನೆ ಉತ್ತಮ ಆಯ್ಕೆಯಾಗಿರಲಿದೆ.
ಈ ಮೇಲಿನ ಆಯ್ಕೆಗಳಲ್ಲಿ ಯಾವ ಪಾನೀಯ ಇಷ್ಟವಾಗುತ್ತದೆಯೋ ಅದನ್ನು ಚಹಾದ ಬದಲಿಗೆ ಸೇವಿಸಬಹುದು.