ಒಣ ಹಣ್ಣುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಹೇರಳವಾಗಿ ಕಂಡುಬರುತ್ತವೆ, ಇದು ಕೂದಲನ್ನು ಬಲಪಡಿಸುವುದರ ಜೊತೆಗೆ ಕೂದಲ ಬೆಳವಣಿಗೆಗೂ ಸಹಕಾರಿ.
ಬೆರ್ರಿ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿ ಇರುತ್ತದೆ. ವಿಟಮಿನ್ ಸಿ ಕಾಲಜನ್ ತಯಾರಿಸಲು ಸಹಕಾರಿಯಾಗಿದ್ದು ಕೂದಲ ಬೆಳವಣಿಗೆಗೂ ಪ್ರಯೋಜನಕಾರಿ.
ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಚಿಯಾ ಸೀಡ್ಸ್ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಮೊಸರಿನಲ್ಲಿ ಪ್ರೋಟೀನ್, ಉತ್ತಮ ಕೊಬ್ಬು ಮತ್ತು ವಿಟಮಿನ್ ಬಿ 6 ಸಮೃದ್ಧವಾಗಿದೆ. ಪ್ರೋಟೀನ್ ಕೂದಲಿಗೆ ತುಂಬಾ ಪ್ರಯೋಜನಕಾರಿ.
ಪಾಲಕ್ ಸೊಪ್ಪಿನಲ್ಲಿರುವ ಕಬ್ಬಿಣಾಂಶವು ಕೂದಲು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಸಿಹಿ ಗೆಣಸಿನಲ್ಲಿ ಕಂಡುಬರುವ ಬೀಟಾ-ಕ್ಯಾರೋಟಿನ್ ವೇಗವಾಗಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ನೆತ್ತಿಯನ್ನು ಆರೋಗ್ಯವಾಗಿಡುವ ಮೂಲಕ ಕೂದಲಿನ ಬೆಳವಣಿಗೆಯೂ ಸಹಾಯ ಮಾಡುತ್ತದೆ.