ಒಡೆದ ಹಿಮ್ಮಡಿಗಳಿಗೆ ಮನೆಮದ್ದು

Published by: Yashaswini V | Jun 12, 2024

ಒಡೆದ ಹಿಮ್ಮಡಿ

ಹಿಮ್ಮಡಿಗಳು ಒಡೆಯಲು ಹಲವು ಕಾರಣಗಳಿರಬಹುದು. ಆದರೆ, ಬಿರುಕುಬಿಟ್ಟ ಹಿಮ್ಮಡಿಗಳು ರಕ್ತಸ್ರಾವದೊಂದಿಗೆ ಅತಿಯಾದ ನೋವುಂಟು ಮಾಡುತ್ತದೆ.

Published by: Yashaswini V | Jun 12, 2024

ಮನೆಮದ್ದು

ನಿಮ್ಮ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿ ನೀವು ಬಿರುಕು ಬಿಟ್ಟಿರುವ ಹಿಮ್ಮಡಿಗಳನ್ನು ಮತ್ತೆ ಸುಂದರವಾಗಿ ಕಾಣುವಂತೆ ಮಾಡಬಹುದು. ಅವುಗಳೆಂದರೆ...

Published by: Yashaswini V | Jun 12, 2024

ಸಸ್ಯಜನ್ಯ ಎಣ್ಣೆ

ರಾತ್ರಿ ಮಲಗುವಾಗ ಸಸ್ಯಜನ್ಯ ಎಣ್ಣೆಗಳಾದ ಹರಳೆಣ್ಣೆ, ಎಳ್ಳೆಣ್ಣೆ, ಆಲಿವ್ ಎಣ್ಣೆಯನ್ನು ಹಿಮ್ಮಡಿಗೆ ಅನ್ವಯಿಸಿ ಮಲಗಿದರೆ, ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.

Published by: Yashaswini V | Jun 12, 2024

ಜೇನುತುಪ್ಪ

ಅರ್ಧ ಕಪ್ ಜೇನುತುಪ್ಪವನ್ನು ನೀರಿನೊಂದಿಗೆ ಬೆರೆಸಿ 15-20 ನಿಮಿಷಗಳ ಕಾಲ ಆ ನೀನಲ್ಲಿ ಪಾದಗಳನ್ನು ನೆನೆಸಿ. ಬಳಿಕ ಸ್ವಚ್ಛವಾದ ಚೌಕದಿಂದ ಪಾದಗಳನ್ನು ಒರೆಸಿ.

Published by: Yashaswini V | Jun 12, 2024

ಬೇವಿನ ಎಲೆ

ಬೇವಿನ ಎಲೆಗಳೊಂದಿಗೆ ಅರಿಶಿನ ಬೆರೆಸಿ ಪೇಸ್ಟ್ ಮಾಡಿ ಒಡೆದ ಹಿಮ್ಮಡಿಗಳಿಗೆ ಹಚ್ಚಿ ಒಂದು ಗಂಟೆ ಬಳಿಕ ಬೆಚ್ಚಗಿನ ನೀರಿನಿಂದ ಕಾಲು ತೊಳೆಯಿರಿ.

Published by: Yashaswini V | Jun 12, 2024

ನಿಂಬೆ

ನಿಂಬೆ ರಸವನ್ನು ಒಡೆದ ಹಿಮ್ಮಡಿಗಳ ಮೇಲೆ ಅನ್ವಯಿಸಿ 15 ನಿಮಿಷಗಳ ಬಳಿಕ ತಣ್ಣೀರಿನಿಂದ ವಾಶ್ ಮಾಡಿದರೆ ಕೆಲವೇ ದಿನಗಳಲ್ಲಿ ಪರಿಹಾರ ಪಡೆಯಬಹುದು.

Published by: Yashaswini V | Jun 12, 2024

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Jun 12, 2024

VIEW ALL

Read Next Story