ದೇಹಕ್ಕೆ ವಯಸ್ಸಾಗುತ್ತಿದ್ದಂತೆ ತ್ವಚೆಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಇದಕ್ಕಾಗಿ ಮನೆಯಲ್ಲಿಯೇ ಇರುವ ಮೊಸರನ್ನು ಬಳಸಬಹುದು.

Ranjitha R K
Apr 05,2023


ಇದಕ್ಕಾಗಿ ಬೇಕಾಗುವ ಸಾಮಗ್ರಿಗಳೆಂದರೆ ಮೊಸರು, ಆಲೋವಿರಾ ಜೆಲ್ ಮತ್ತು ಸೌತೆಕಾಯಿ


ಸೌತೆಕಾಯಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶವು ತ್ವಚೆಗೆ ನೀರಿನ ಅಂಶವನ್ನು ಒದಗಿಸುತ್ತದೆ. ಅಲ್ಲದೆ ಡೀಪ್ ಕ್ಲೀನ್ ಮಾಡುತ್ತದೆ.


ಆಲೋವಿರಾದಲಿರುವ ಆಂಟಿ ಆಕ್ಸಿಡೆಂಟ್ ಅಂಶವು ತ್ವಚೆಗೆ ಪೋಷಣೆ ನೀಡುತ್ತದೆ.


ಎರಡು ಚಮಚ ಮೊಸರು ಮತ್ತು ಅಗತ್ಯಕ್ಕನುಸಾರ ಆಲೋವಿರಾ ಜೆಲ್ ತೆಗೆದುಕೊಂಡು ಮಿಕ್ಸ್ ಮಾಡಿ.ನಂತರ ಇದಕ್ಕೆ ರುಬ್ಬಿದ ಸೌತೆಕಾಯಿ ಕೂಡಾ ಹಾಕಿ.


ಈ ಮಿಕ್ಸ್ ಅನ್ನು ಮುಖಕ್ಕೆ ಹಚ್ಚಿ. 15 ರಿಂದ 20 ನಿಮಿಷಗಳವರೆಗೆ ಬಿಟ್ಟು ಮುಖವನ್ನು ನೀರಿನಿಂದ ತೊಳೆಯಿರಿ.


ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಬಳಸಬಹುದು. ಆದರೆ ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚುವ ಮುನ್ನ ಮುಖವನ್ನು ಚೆನ್ನಾಗಿ ತೊಳೆಯುವುದನ್ನು ಮರೆಯಬೇಡಿ.

VIEW ALL

Read Next Story