ಹಾಲಿನ ಉತ್ಪನ್ನಗಳಲ್ಲಿ ಕಂಡುಬರುವ ವಿಟಮಿನ್ ಬಿ ಮತ್ತು ಸತುವು ಕೂದಲನ್ನು ಸಮೃದ್ಧವಾಗಿ ಬೆಳೆಯುವಂತೆ ಮಾಡುತ್ತದೆ.
ಹೇರ್ ಪ್ಯಾಕ್ ರೀತಿಯಲ್ಲಿ ಕೂದಲಿಗೆ ಮೊಸರನ್ನು ಹಚ್ಚಿದರೆ ನಿಮಗೆ ಅದ್ಭುತ ಪ್ರಯೋಜನವನ್ನು ಸಿಗುತ್ತದೆ.
ಮೊಸರನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಮತ್ತು ನೆತ್ತಿಯಲ್ಲಾಗುವ ತುರಿಕೆ ಸಮಸ್ಯೆಯನ್ನು ದೂರ ಮಾಡಿತ್ತದೆ.
ಮೊಸರು ಕೂದಲಿಗೆ ಡೀಪ್ ಕಂಡೀಷನಿಂಗ್ ಹೇರ್ ಮಾಸ್ಕ್ ರೀತಿಯಲ್ಲಿ ಕೆಲಸ ಮಾಡಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.
ಕೆಮಿಕಲ್’ಯುಕ್ತ ಹೇರ್ ಮಾಸ್ಕ್ ಬಳಕೆ ಮಾಡಿ ಕೂದಲು ಹಾಳಾಗಿದ್ದರೆ ಮೊಸರನ್ನು ಹಚ್ಚಿ. ಇದು ಪೋಷಣೆ ನೀಡುವುದರ ಜೊತೆ ಕೂದಲನ್ನು ಸ್ಮೂತ್ ಮಾಡುತ್ತದೆ.
ಮೊಸರಿನಲ್ಲಿರುವ ಕೊಬ್ಬಿನ ಅಂಶ ನಿಮ್ಮ ಕೂದಲನ್ನು ನ್ಯಾಚುರಲ್ ಆಗಿ ಇಡುತ್ತದೆ.
ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ನೆತ್ತಿಯನ್ನು ಸ್ವಚ್ಛಗೊಳಿಸಲು, ಡೆಡ್ ಸ್ಕಿನ್’ಗಳನ್ನು ಹೋಗಲಾಡಿಳಿಸಲು ಸಹಾಯ ಮಾಡುತ್ತದೆ.
ತೆಂಗಿನ ಎಣ್ಣೆ, ಬಾದಾಮಿ ಎಣ್ಣೆಯಂತಹ ಇತರ ಆರೋಗ್ಯಕರ ಎಣ್ಣೆಗಳೊಂದಿಗೆ ಮಿಶ್ರಣ ಮಾಡಿ ಮೊಸರನ್ನು ತಲೆಗೆ ಹಚ್ಚಿದರೆ ಅದ್ಭುತ ಪ್ರಯೋಜನ ಸಿಗುತ್ತದೆ.