ನಮ್ಮ ಆರೋಗ್ಯವು ಸಂಪೂರ್ಣವಾಗಿ ನಮ್ಮ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಜಂಕ್ ಫುಡ್ ಸೇವಿಸುತ್ತಾರೆ. ಇದು ನಮ್ಮ ಆರೋಗ್ಯದ ಮೇಲೆ ಬೀರುತ್ತದೆ.
ನಮ್ಮ ಕೂದಲಿನ ಮೇಲೆ ನಾವು ತಿನ್ನುವ ಆಹಾರ ಬಹಳ ಪರಿಣಾಮ ಬೀರುತ್ತದೆ. ಕೆಟ್ಟ ಆಹಾರ ಪದ್ದತಿಯಿಂದಾಗಿ ಕೂದಲು ಉದುರುವುದು, ಬೆಳ್ಳಗಾಗುವುದು, ಶುಷ್ಕ ಕೂದಲು, ತಲೆ ಹೊಟ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕೂದಲಿನ ಈ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಮಾರ್ಕೆಟ್‌ನಲ್ಲಿ ಸಿಗುವ ಶಾಂಪೂ, ಕಂಡಿಷನರ್, ಎಣ್ಣೆ, ಬಣ್ಣ ಇತ್ಯಾದಿಗಳನ್ನು ಬಳಸುತ್ತೇವೆ. ಆದರೆ ಇವುಗಳಲ್ಲಿ ಅಪಾಯಕಾರಿ ರಾಸಾಯನಿಕ ಸೇರಿರುತ್ತವೆ. ಅದರ ಬದಲು ಈ ಮನೆಮದ್ದು ಬಳಸಬಹುದು.
ಕರಿಬೇವಿನ ಎಲೆಗಳು ಕೂದಲು ಬಿಳಿಯಾಗುವುದನ್ನು ತಡೆಯುತ್ತವೆ. ಮೆಲನಿನ್ ಕೊರತೆಯಿಂದಾಗಿ, ಕೂದಲು ಬಿಳಿಯಾಗುತ್ತವೆ.
ಕರಿಬೇವಿನ ಎಲೆಗಳು ಕೂದಲಿನಲ್ಲಿರುವ ಮೆಲನಿನ್ ಕೊರತೆಯನ್ನು ಹೋಗಲಾಡಿಸುತ್ತದೆ. ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಕೂದಲು ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ.
ಹೇರ್ ಮಾಸ್ಕ್ ಮಾಡಲು, ಕರಿಬೇವಿನ ಎಲೆಗಳು, ತೆಂಗಿನ ಎಣ್ಣೆ, ಬೇವಿನ ಎಲೆಗಳು, ವಿಟಮಿನ್ ಇ ಕ್ಯಾಪ್ಸುಲ್ ಗಳು ಮತ್ತು ಮೊಸರು ಬೇಕಾಗುತ್ತದೆ. ಮಾಸ್ಕ್ ಮಾಡಲು ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿ ಬಟ್ಟಲಿನಲ್ಲಿ ತೆಗೆದುಕೊಂಡು ಇಟ್ಟುಕೊಳ್ಳಿ.
ಇನ್ನೊಂದು ಪಾತ್ರೆಯಲ್ಲಿ ತೆಂಗಿನೆಣ್ಣೆ, ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಮೊಸರು ಹಾಕಿ ಬೀಟ್ ಮಾಡಿ. ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ. ತಣ್ಣಗಾದ ನಂತರ ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ.
ಹೇರ್ ಮಾಸ್ಕ್ ಹಚ್ಚುವ ಮೊದಲು, ಕೂದಲನ್ನು ಸರಿಯಾಗಿ ತೊಳೆದು ಒಣಗಿಸಿ. ನಂತರ ಹೇರ್ ಮಾಸ್ಕ್ ಹಚ್ಚಿ. ಒಂದು ಗಂಟೆಯ ನಂತರ ತಲೆಸ್ನಾನ ಮಾಡಿ. ವಾರದಲ್ಲಿ ಎರಡು ಬಾರಿ ಅನುಸರಿಸುತ್ತಾ ಬನ್ನಿ, ಪರಿಣಾಮ ಗೋಚರಿಸುತ್ತದೆ.