ನಿಂಬೆ ರಸ

ತೆಂಗಿನಕಾಯಿಯ ನೀರಿಗೆ ಸ್ವಲ್ಪ ಬಿಸಿನೀರು ಮತ್ತು ನಿಂಬೆ ರಸವನ್ನು ಬೆರೆಸಿ ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

Puttaraj K Alur
Jun 10,2024

ಮೆಂತ್ಯ ಸೊಪ್ಪಿನ ಪೇಸ್ಟ್‌

ಮೆಂತ್ಯ ಸೊಪ್ಪಿನ ಪೇಸ್ಟ್‌ ಅನ್ನು ತಲೆಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ಅಡುಗೆ ಸೋಡಾ

1 ಚಮಚ ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ 5 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ಮೆಹೆಂದಿ

ಕೇವಲ ನಿಂಬೆ ರಸವನ್ನು ಕೂದಲ ಬುಡಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ತಲೆಕೂದಲಿಗೆ ಮೆಹೆಂದಿ ಹಾಕುವುದರಿಂದಲೂ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

ಮೊಸರು

ಹುಳಿ ಮೊಸರನ್ನು ತಲೆಬುಡಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ಬಿಲ್ವಪತ್ರೆ

ಬಿಲ್ವಪತ್ರೆಯ ತಿರುಳನ್ನು ಬೇಯಿಸಿ ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ಕಡಿಮೆಯಾಗುತ್ತದೆ.

ದಾಸವಾಳ ಎಲೆ

ಯಾವುದೇ ಬಣ್ಣದ ದಾಸವಾಳ ಎಲೆಯನ್ನು ರುಬ್ಬಿ ಅದಕ್ಕೆ ಮೊಸರು ಹಾಕಿ ಕಲೆಸಿ ಬಳಸುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ.

ಆಲಿವ್ ಎಣ್ಣೆ

ತಲೆಗೆ ಆಲಿವ್ ಎಣ್ಣೆಯನ್ನು ಬಳಸುವುದರಿಂದ ಕೂದಲು ಮೃದುವಾಗುವುದಲ್ಲದೇ ಹೊಟ್ಟು ನಿವಾರಣೆಯಾಗುತ್ತದೆ.

VIEW ALL

Read Next Story