ಹೆಚ್ಚು ಕೆಫೀನ್ ಸೇವನೆಯು ಹಾರ್ಮೋನ್ ಸಮತೋಲನವನ್ನು ಅಡ್ಡಿಪಡಿಸುತ್ತದೆ.ಥೈರಾಯ್ಡ್ ಗುಣಪಡಿಸುವ ಕಾರ್ಯವನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ಕಾಫಿ ಸೇವನೆಯಿಂದ ದೂರ ಉಳಿಯಬೇಕು.
ಸಕ್ಕರೆಯುಳ್ಳ ತಿಂಡಿ ಮತ್ತು ಪಾನೀಯಗಳನ್ನು ಸೇವಿಸುವುದರಿಂದ ದೇಹದಲ್ಲಿ ಉರಿಯೂತ ಹೆಚ್ಚಾಗುವುದರೊಂದಿಗೆ, ಥೈರಾಯ್ಡ್ ಕಾರ್ಯವನ್ನು ದುರ್ಬಲಗೊಳಿಸುತ್ತದೆ.
ಅತಿಯಾದ ಮದ್ಯ ಸೇವನೆಯು ಥೈರಾಯ್ಡ್ ಹಾರ್ಮೋನ್ ಸಂಶ್ಲೇಷಣೆಯನ್ನು ದುರ್ಬಲಗೊಳಿಸುತ್ತದೆ. ಇದು ಥೈರಾಯ್ಡ್ ಹಾರ್ಮೋನ್ ಸ್ರವಿಸುವಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಸಂಸ್ಕರಿಸಿದ ಆಹಾರಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್, ಕಾರ್ಬೋಹೈಡ್ರೆಟ್ ಮತ್ತು ಸಂರಕ್ಷಕಗಳು ಅಧಿಕವಾಗಿರುತ್ತವೆ. ಇವು ಥೈರಾಯ್ಡ್ ಹಾರ್ಮೋನ್ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.
ಉತ್ತಮ ಥೈರಾಯ್ಡ್ ಕಾರ್ಯಕ್ಕೆ ಅಯೋಡಿನ್ ಅತ್ಯಗತ್ಯ. ಅದರೆ ಹೆಚ್ಚು ಅಯೋಡಿನ್ ತೆಗೆದುಕೊಳ್ಳುವುದರಿಂದ ಥೈರಾಯ್ಡ್ ಗ್ರಂಥಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಸೋಯಾ ಉತ್ಪನ್ನಗಳು ಗೋಟ್ರೋಜೆನ್‌ಗಳಲ್ಲಿ ಸಮೃದ್ಧವಾಗಿವೆ. ಇದು ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಇವುಗಳ ಸೇವನೆ ಉತ್ತಮವಲ್ಲ.