ಐಸ್ ಕ್ಯೂಬ್‌ಗಳನ್ನ ನೋರ್ಮಲ್ ಆಗಿ ನಾವು ಪಾನಿಯಾಗಳಲ್ಲಿ ಉಪಯೋಗಿಸುತ್ತೇವೆ. ಅದರೆ ಇದಷ್ಟೇ ಅಲ್ಲದೆ ಐಸ್ ಕ್ಯೂಬ್ಸ್‌ನಿಂದ ಬಹಳಷ್ಟು ಉಪಯೋಗಗಳಿವೆ. ಅವು ಏನು ಗೊತ್ತಾಗಬೇಕಾ? ಇದನ್ನು ನೋಡಿ.
ಐಸ್ ಕ್ಯೂಬ್ಸ್ ಅನ್ನು ಬಹಳ ಸುಲಭವಾಗಿ ರೆಡಿ ಮಾಡಬಹುದು. ಫ್ರೀಜರ್‌ನಲ್ಲಿನ ಪ್ಲೇಟ್‌ಗೆ ನೀರು ಹಾಕಿ ಇಟ್ಟರೆ ಸುಲಬವಾಗಿ ಐಸ್ ಕ್ಯೂಬ್ಸ್ ಸ್ವಲ್ಪ ಸಮಯದಲ್ಲೇ ರೆಡಿಯಾಗಿರುತ್ತದೆ.
ತರಕಾರಿಗಳ ಸಿಪ್ಪೆ ತೆಗೆಯುವುದು ನಿಮಗೆ ಕಷ್ಟ ಅನಿಸಿದರೆ. ಕೆಲ ಕಾಲ ನೀವು ಆ ತರಕಾರಿಗಳನ್ನು ಐಸ್ ಕ್ಯೂಬ್ಸ್ ಇರುವ ಬೌಲ್‌ನಲ್ಲಿ ಹಾಕಿ ಇಡಿ. ಇದರಂದ ತರಕಾರಿ ಅಥವಾ ಹಣ್ಣಿನ ಮೇಲಿನ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.
ಸೀ ಫುಡ್ ಅನ್ನು ಶೇಕರಿಸುವುದು ತುಂಬಾ ಮುಖ್ಯ. ಸರಿಯಾಗಿ ಶೆಕರಿಸದೆ ಹೋದಲ್ಲಿ ಮೀನು ಕೆಟ್ಟು ಹೋಗುತ್ತದೆ. ಇದರಿಂದ ಐಸ್ ಕ್ಯೂಬ್ಸ್ ಹಾಕಿ ಸೀ ಫುಡ್ ಶೆಕರಿಸುವುದರಂದ ದೀರ್ಘ ಕಾಲದ ವರೆಗೆ ನಾವು ಸೀ ಫುಡ್ ಅನ್ನು ಶೇಕರಿಸಿ ಹಿಡಬಹುದು.
ಎಷ್ಟೇ ಚಿನ್ನಾಗಿ ತೊಳೆದರೂ ಮಿಕ್ಸರ್ ಜಾರ್‌ನಲ್ಲಿ ಪದಾರ್ಥಗಳು ಹಾಗೆಯೇ ಉಳಿದಿರುತ್ತದೆ. ಐಸ್ ಕ್ಯೂಬ್‌ಗಳನ್ನ ಮಿಕ್ಸರ್‌ಗೆ ಹಾಕಿ ಬ್ಲೆಂಡ್ ಮಾಡುವುದರಿಂದ ಬ್ಲೇಡ್‌ನಲ್ಲಿ ಸಿಲುಕಿರುವ ಪದಾರ್ಥಗಳನ್ನು ಸುಲಭವಾಗಿ ತೆಗೆಯಬಹುದು.
ಅವಸರದಲ್ಲಿ ಅಡುಗೆ ಮಾಡುತ್ತೀರಿ ಆದರೆ ತಿನ್ನಲು ಸಮಯ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಆಹಾರವನ್ನು ತಣ್ಣಗಾಗಿಸಲು ಒಂದು ಬೌಲ್‌ನಲ್ಲಿ ಐಸ್ ಕ್ಯೂಬ್ಸ್ ಹಾಕಿ ಅದಕ್ಕೆ ನೀರು ತುಂಬಿಸಿ, ಆಹಾರದ ಪಾತ್ರೆಯನ್ನು ಐಸ್ ಕ್ಯೂಬ್ ತುಂಬಿಸಿರುವ ಪಾತ್ರೆಯಲ್ಲಿಡಿ. ಇದರಿಂದಾಗಿ ಆಹಾರವನ್ನು ಬೇಗ ತಂಪಾಗಿಸಬಹುದು.
ಕೆಲವೊಮ್ಮೆ ನಮಗೆ ಗೊತ್ತಿದ್ದೋ, ಗೊತ್ತಿದೆಯೋ ಹೆಚ್ಚು ಅಡುಗೆಗೆ ಎಣ್ಣೆ ಹಾಕಿಬಿಡುತ್ತೇವೆ. ಈ ಸಂದರ್ಭದಲ್ಲಿ ಐಸ್ ಕ್ಯೂಬ್ಸ್ ಅನ್ನು ಎಣ್ಣೆಯಲ್ಲಿ ಮುಳುಗಿಸಿ ಮೇಲೆತ್ತಿ. ಎಣ್ಣೆ ಎಲ್ಲವೂ ಐಸ್ ಕ್ಯೂಬ್ಸ್‌ಗೆ ಅಂಟಿಕೊಳ್ಳುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.