ಚಹಾ ಮಾಡಿದ ನಂತರ ಕೊನೆಯಲ್ಲಿ ಟೀ ಪುಡಿ ಉಳಿಯುವುದು ಸಾಮಾನ್ಯ. ಆದರೆ ಈ ಉಳಿದ ಟೀ ಪುಡಿ ಕಸದಲ್ಲಿ ಹಾಕಬೇಕಿಲ್ಲ ಅದರಿಂದಲೂ ಸಾಕಷ್ಟು ಉಪಯೋಗಗಳಿವೆ.
ನೊರ್ಮಲ್ ಆಗಿ ಶೂ, ಸಾಕ್ಸ್ ವಾಸನೆ ಬಂದೇ ಬರುತ್ತದೆ. ಈ ಟೀ ಪುಡಿಯಿಂದ ಶೂ ಹಾಗೂ ಸಾಕ್ಸ್ ತೆಳೆಯುವುದರಿಂದ ಇದರಲ್ಲಿನ ವಾಸನೆ ದೂರವಾಗುತ್ತದೆ.
ಟೀ ಪುಡಿಯಲ್ಲಿ ಹೆಚ್ಚು ಆಂಟಿ ಆಕ್ಸಿಡೆಂಟ್‌ಗಳು ಇರುತ್ತವೆ. ಇದನ್ನು ನಿಮ್ಮ ಚರ್ಮದ ಮೇಲೆ ಉಪಯೋಗಿಸುವುದರಿಂದ ನಿಮ್ಮ ಚರ್ಮದಲ್ಲಿನ ಟ್ಯಾನ್ ತೆಗೆಯಬಹುದು.
ನಿದ್ದೆ ಹಾಗೂ ಸ್ಟ್ರೆಸ್‌ನಿಂದ ಕಣ್ಣಿನ ಕೆಳಗೆ ಕಪ್ಪು ಕಲೆಗಳು ಉಂಟಾಗುತ್ತವೆ. ಬಳಕೆಯಾಗಿ ಉಳಿದ ಟೀ ಪುಡಿಯನ್ನು ಕಣ್ಣಿನ ಕೆಳಗೆ ಹಚ್ಚುವುದರಿಂದ ಕಪ್ಪು ಕಲೆ ನಿವಾರಿಸಬಹುದು.
ಉಳಿದ ಟೀ ಪುಡಿಯನ್ನ ಬಿಸಾಕುವ ಬದಲು ಗಿಡಗಳಿಗೆ ಹಾಕುವುದರಿಂದ ಇದು ಗಿಡಗಳಿಗೆ ಗೊಬ್ಬರವಾಗಿ ಉಪಯೋಗವಾಗುತ್ತದೆ.
ಉಳಿದ ಟೀ ಪುಡಿಯನ್ನ ಹಲ್ಲುಜ್ಜಲು ಬಳಸಿ. ಇದರಿಂದ ನಿಮ್ಮ ಹಲ್ಲಿನ ಮೇಲೆ ಕಟ್ಟಿರುವ ಕಲೆಗಳು ಮಾಯವಾಗುತ್ತದೆ.
ಉಳಿದ ಟೀ ಪುಡಿಯಿಂದ ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೆ. ಗಾಯಕ್ಕೆ ಹಚ್ಚುವುದರಿಂದ ರಕ್ತಸ್ರಾವ ನಿಲ್ಲಿಸಬಹುದು.
ನಿಮ್ಮ ಚರ್ಮ ಕಡಿಯುತ್ತಿದ್ದರೆ ಈ ಉಪಯೋಗಿಸಿ ಉಳಿದ ಟೀ ಪುಡಿ ಬಳಸುವುದರಿಂದ ಉರಿತ ಕಡಿಮೆಮಾಡಬಹುದು.