ಕಿತ್ತಳೆ ತಿಂದ ಮೇಲೆ ಈ ವಸ್ತುಗಳಿಂದ ದೂರವಿರಿ

ಕಿತ್ತಳೆ ಹಣ್ಣು

ಕಿತ್ತಳೆ ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ವಿಟಮಿನ್ ಸಿ ಕೊರತೆ ನೀಗಿಸಬಹುದು. ಇದು ಚರ್ಮ ಮತ್ತು ಆರೋಗ್ಯ ಎರಡಕ್ಕೂ ಪ್ರಯೋಜನಕಾರಿ. ಆದರೆ ಅದರೊಂದಿಗೆ ಕೆಲವು ಪದಾರ್ಥಗಳನ್ನು ತಿನ್ನುವುದು ಹಾನಿಕಾರಕವಾಗಿದೆ.

ಹಾಲು

ಕಿತ್ತಳೆ ಹಣ್ಣು ತಿಂದ ಮೇಲೆ ಹಾಲು ಕುಡಿಯಬಾರದು. ಇದರಿಂದ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಪಪ್ಪಾಯ

ಕಿತ್ತಳೆ ಹಣ್ಣಿನ ಜೊತೆಗೆ ಪಪ್ಪಾಯ ಹಣ್ಣನ್ನು ಕೂಡಾ ಸೇವಿಸಬಾರದು, ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಕ್ಯಾರೆಟ್

ಇನ್ನು ಕ್ಯಾರೆಟ್ ಮತ್ತು ಕಿತ್ತಳೆಯನ್ನು ಯಾವುದೇ ಕಾರಣಕ್ಕೂ ಒಟ್ಟಿಗೆ ಸೇವಿಸಬಾರದು

ಪಾನ್

ಕಿತ್ತಳೆ ಹಣ್ಣು ಅಥವಾ ಅದರ ಜ್ಯೂಸ್ ಸೇವನೆ ಬಳಿಕ ಪಾನ್ ಸೇವಿಸಬಾರದು. ಇದರಿಂದ ಶ್ವಾಸ ಕೋಶ ಸಂಬಂಧಿ ಸಮಸ್ಯೆ ಎದುರಾಗಬಹುದು.

ಮೊಸರು

ಮೊಸರಿನ ಜೊತೆ ಕಿತ್ತಳೆ ಹಣ್ಣನ್ನು ಸೇವಿಸಿದರೆ ಅದು ಆರೋಗ್ಯವನ್ನು ಹದಗೆಡಿಸುತ್ತದೆ.


ಭೋಜನ ಮಾಡಿದ ತಕ್ಷಣ ಕಿತ್ತಳೆ ತಿನ್ನುವುದು ಒಳ್ಳೆಯದಲ್ಲ. ಊಟ ಮಾಡಿದ ಅರ್ಧ ಗಂಟೆಯ ಬಳಿಕ ಕಿತ್ತಳೆ ಸೇವಿಸಬೇಕು.


ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.

VIEW ALL

Read Next Story